ದರೋಡೆಕೋರ ಅಪ್ಪ; ಟಿಪ್ಪುವಿನದೆಂಥಾ ಶ್ರೇಷ್ಠ ಕುಲ?

ಸಂತೋಷ್ ತಮ್ಮಯ್ಯ

Tipu_Sultan_BLಕರ್ನಾಟಕ ಕಂಡ ದಕ್ಷ ಮತ್ತು ದಿಟ್ಟ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಅನುಭವಗಳನ್ನು ಹೇಳುತ್ತಿದ್ದರು.
“ಒಂದು  ದಿನ  ನಾನಿದ್ದ ಸ್ಟೇಷನ್‌ಗೆ ಪತ್ರಕರ್ತನೊಬ್ಬ ಬಂದ. ಆತ ಅಪರಾಧ ವರದಿಗಾರಿಕೆಗಾಗಿ ಅಲ್ಲಿಗೆ ಬಂದಿದ್ದ. ಬಂದ ಕೆಲಸ ಮುಗಿದರೂ ಆತ ಹೊರಡಲಿಲ್ಲ. ಏನೇನೋ ಹರಟುತ್ತಾ ಆತ ಅಲ್ಲೇ ಕುಳಿತಿದ್ದ. ಆತನೊಬ್ಬ  ಮುಸಲ್ಮಾನ. ಅದೇ ಸ್ಟೇಷನ್ನಿನಲ್ಲಿದ್ದ ಅಧಿಕಾರಿಯೊಬ್ಬರು ಕೂಡಾ ಮುಸಲ್ಮಾನರಾಗಿದ್ದರು. ಈತ ಅವರನ್ನು ಕಾಯುತ್ತಿದ್ದ. ಭೇಟಿಯ ವಿಷಯವೇನು ಎಂದು ನಾನು ಆತನಲ್ಲಿ ಕೇಳಿದೆ. ಆತ ಮುಚ್ಚುಮರೆಯಿಲ್ಲದೆ ತನ್ನ ಅಂತರಂಗದಲ್ಲಿರುವುದನ್ನು ಹೇಳಿಕೊಂಡ. ಅದರ ತಾತ್ಪರ್ಯವಿಷ್ಟೇ, ಕೆಲದಿನಗಳ ಹಿಂದೆಯಷ್ಟೇ ಬೆಂಗಳೂರಿನ ಓರ್ವ ಕ್ರೈಂ ಪತ್ರಿಕೆಯ ಸಂಪಾದಕನೊಬ್ಬ ಭೂಗತ ಜಗತ್ತಿನ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿ ಬೆಳೆಯುತ್ತಿದ್ದ. ಪತ್ರಿಕೆ ಬೆಳೆದಂತೆ ಆತನಿಗೆ ನಾಡು-ನುಡಿಯ ಬಗ್ಗೆ  ಚಳವಳಿಯನ್ನೂ ಆರಂಭಿಸಿ ರಾಜ್ಯದಲ್ಲಿ ಖ್ಯಾತನಾಮನಾಗಬೇಕೆಂಬ ಅಭಿಲಾಷೆಯೂ ಹುಟ್ಟಿತು. ಅದೇ ಹೊತ್ತಲ್ಲಿ ಇನ್ನೊಂದಿಬ್ಬರೂ ಕೂಡಾ ಪತ್ರಿಕೆ ಆರಂಭಿಸಿ ನಾಡು-ನುಡಿ ರಕ್ಷಣೆಯ ಸಂಘಟನೆಗಳನ್ನು ಕಟ್ಟಿಕೊಳ್ಳತೊಡಗಿದರು. ಈ ಬೆಳವಣಿಗೆಗಳೆಲ್ಲವನ್ನೂ ಗಮನಿಸುತ್ತಿದ್ದ ಆ ಮುಸಲ್ಮಾನ ವರದಿಗಾರನಿಗೆ ತಾನೂ ಆ ದಾರಿಯಲ್ಲೇ ಸಾಗಬೇಕು. ಪ್ರತಿಷ್ಠಿತ ವ್ಯಕ್ತಿಯಾಗಬೇಕೆಂಬ ಉಮ್ಮೇದು ಉಂಟಾಯಿತು. ಈ ಬಗ್ಗೆ ಸಲಹೆ ಕೇಳಲು ಆತ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗುವವನಿದ್ದ. ಅದೇ ಹೊತ್ತಿಗೆ ಆ ಅಧಿಕಾರಿ ಠಾಣೆಗೆ ಆಗಮಿಸಿದರು. ಈತ ಅವರ ಬಳಿ ತನ್ನ ಇಂಗಿತವನ್ನು ಅರುಹಿದ. ಅವರು ಯೋಚಿಸಿ ಏನೋ ಹೊಳೆದವರಂತೆ  “ನೋಡು ಭಾಷೆ-ನೀರು ಇತ್ಯಾದಿಗಳ ವಿಷಯದಲ್ಲಿ ನೀನು ಸಂಘ ಕಟ್ಟಿದರೆ ಏನೂ ಬೇಳೆ ಬೇಯುವುದಿಲ್ಲ. ಟಿಪ್ಪು ಸುಲ್ತಾನನ ಹೆಸರಿಟ್ಟುಕೊಂಡು  ಸಂಘಕಟ್ಟು. ಅವರ ಹೆಸರಲ್ಲಿ ಯಾರೂ ಸಂಘ ಕಟ್ಟಿಲ್ಲ. ಆಗ ಮುಸಲ್ಮಾನರೆಲ್ಲರೂ ನಿನ್ನ ಹಿಂದೆ ಬರುತ್ತಾರೆ. ಅವರ ಜನ್ಮಾಚರಣೆಯನ್ನು ಮಾಡು. ನೀನೂ ಬೆಳೀತಿಯಾ” ಎಂದರು. ಆ ವರದಿಗಾರ ಖುಷಿಯಾದ. ಹುದಾಫಿಸ್ ಎಂದು ವಂದಿಸಿ ಹೊರಟುಹೋದ. ಅದಾದ ಕೆಲದಿನಗಳಲ್ಲೇ ಆತ ಟಿಪ್ಪುಸುಲ್ತಾನ್ ಹೆಸರಿನ ಸಂಘಟನೆಯನ್ನು ಕಟ್ಟಿ ಆತನ ಜನ್ಮಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೊಡಲು ಠಾಣೆಗೆ ಬಂದ. ಆತ ನನಗೂ ಆಮಂತ್ರಣ ಪತ್ರಿಕೆಯನ್ನು ಕೊಡಲು ಬಂದ. ನಾನು ಸಾಹೇಬರಿಗೆ ಕೊಡು ಸಾಕು ಎಂದು ಆತನನ್ನು ಕಳುಹಿಸಿದೆ. ನನ್ನ ಪೂರ್ವಿಜರನ್ನು ಕೊಂದವನ ಜನ್ಮಾಚರಣೆಯ ಆಮಂತ್ರಣ ಪತ್ರಿಕೆ! ಮನಸ್ಸು ನೋವಿನಿಂದ ಹಿಂಡಿತು. ಮುಂದೆ ಆತ ಟಿಪ್ಪು ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದ. ಇದು ಕೆಲವು ಮುಸಲ್ಮಾನರ ಕಣ್ಣನ್ನು
ಕುಕ್ಕತೊಡಗಿತು. ಅವರು ಇವನಿಗೆ ಪರ್ಯಾಯವಾಗಿ ಟಿಪ್ಪು ಹೆಸರಿನ ಹಲವು ಸಂಘಗಳನ್ನು ಕಟ್ಟತೊಡಗಿದರು. ಹೀಗೆ ಬೆಂಗಳೂರಿನಲ್ಲಿ ಆರಂಭವಾದ ಟಿಪ್ಪು ಸಂಘ ಕಟ್ಟುವ ಪೈಪೋಟಿ ಮೈಸೂರು, ಶ್ರೀರಂಗಪಟ್ಟಣ, ಕೊಡಗು, ಕೋಲಾರ, ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು, ಭಟ್ಕಳ, ಕಾರವಾರಗಳಿಗೆಲ್ಲಾ ಹರಡಿತು. ಅಥವಾ ಬೆಂಗಳೂರಿನ ಸಂಘಗಳ ಶಾಖೆಗಳು ಅಲ್ಲೆಲ್ಲಾ ಶುರುವಾದವು.”
೮೦ರ ದಶಕದಲ್ಲಿ ಆರಂಭವಾದ ಈ ಪ್ರಕ್ರಿಯೆ ಇಂದು ಈ ಪರಿಸ್ಥಿತಿಗೆ ಮುಟ್ಟುತ್ತದೆ ಎಂದು ನಾನೆಣಿಸಿರಲಿಲ್ಲ ಎಂದು ಆ ಪೊಲೀಸ್ ಅಧಿಕಾರಿ ಇಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯ ಸ್ವಾರ್ಥದಿಂದ, ಪದವಿಯಾಸೆಯಿಂದ ಶುರುವಾದ “ಟಿಪ್ಪು ಚಳವಳಿ” ಮುಂದೆ ಭಯೋತ್ಪಾದಕ ಸಂಘಟನೆಗಳ ಅಜೆಂಡಾ ಆಗುವಷ್ಟು ತೀವ್ರವಾಗಿ ಬೆಳೆಯಿತು. ಅದುವರೆಗೆ ಪಠ್ಯಪುಸ್ತಕಗಳಲ್ಲಿ ಅಚ್ಚಾಗುತ್ತಿದ್ದ “ಮೈಸೂರಿನ ಹುಲಿ ಟಿಪ್ಪು ಸುಲ್ತಾನ”, “ಸರ್ವಧರ್ಮಸಹಿಷ್ಣುವಾಗಿದ್ದ ಟಿಪ್ಪು” ಇತ್ಯಾದಿ ವರ್ಣನೆಗಳಿಗೆಲ್ಲಾ ಜೀವಬಂದು ಟಿಪ್ಪು ಜೀವಂತ ಹುಲಿಯನ್ನು ಕೊಲ್ಲುವ ಚಿತ್ರವೂ ಕೂಡಾ ಅಚ್ಚಾಗತೊಡಗಿತು. ಮುಸಲ್ಮಾನರ ಅಟೋ, ಟೆಂಪೋ, ಸ್ಕೂಟರುಗಳಲ್ಲೆಲ್ಲಾ “ಏಕ್ ಥಾ ಟೈಗರ್” ಎಂಬ ಸ್ಟಿಕ್ಕರುಗಳೂ ಅಂಟಿಸಲ್ಪಟ್ಟವು. ರಾಜಕೀಯ ಪಕ್ಷಗಳು ವೋಟಿಗಾಗಿ ಟಿಪ್ಪು ಸಂಘಟನೆಗಳನ್ನು ಬಳಸಿಕೊಂಡವು. ಇಸ್ಲಾಮಿನ ಪ್ರಚಾರಕ್ಕೆ ಓರ್ವ ಮಹಾಪುರುಷ ಸಿಕ್ಕಿಬಿಟ್ಟಿದ್ದ. ಇದ್ದಕ್ಕಿದ್ದಂತೆ ಸಾಹಿತಿಗಳೆಲ್ಲರೂ ಆತನ ಬಗ್ಗೆ ಬರೆಯತೊಡಗಿದರು. ಭಾಷಣಗಳಲ್ಲೂ ಟಿಪ್ಪು ಬಂದುಹೋದ. ಇನ್ನೂ ಒಂದು ವಿಶೇಷವೆಂದರೆ ಅಷ್ಟರಹೊತ್ತಿಗೆ ಟಿಪ್ಪು ಕೇವಲ ಮುಸಲ್ಮಾನರ ಪ್ರಿಯನಾಗಿರದೆ ಮುಸಲ್ಮಾನರನ್ನು ಹೊಗಳುವವರ ಪ್ರೀತಿಯ ವ್ಯಕ್ತಿಯೂ ಆಗಿದ್ದ. ಜಾತ್ಯತೀತ ಸಮಾಜದ ಮಹಾನ್ ನಾಯಕನೂ ಆಗಿ ಬೆಳೆದಿದ್ದ. ಹಿಂದೂ ಬುದ್ಧಿಜೀವಿಗಳೆಲ್ಲರೂ ಆತನ ಹಿಂದೆ ನಿಂತರು. ಶ್ರೀರಂಗಪಟ್ಟಣದ ಗೋರಿ, ಕಲ್ಲು-ಕಂಬಗಳಿಗೆಲ್ಲಾ ಫಲಕಗಳು ಬಂದು ಎಲ್ಲವೂ ಟಿಪ್ಪು ಸ್ವತ್ತಾಗಿ ಬದಲಾಯಿತು. ರಂಗುರಂಗಿನ ಕಥೆಗಳು ಹುಟ್ಟಿಕೊಂಡವು. ಓರ್ವ ಸಮರ್ಥ, ದಕ್ಷ, ಆಡಳಿತ ಮುತ್ಸದ್ಧಿ ರಾಜನನ್ನು ವರ್ಣಿಸುವ ಪದಪುಂಜಗಳೆಲ್ಲವೂ ಟಿಪ್ಪು ವೈಭಕರಣಕ್ಕೆ ಬಳಕೆಯಾದವು. ಹೀಗಾಗಿ ಆತ ಭಾಷಾಪ್ರೇಮಿಯಾದ, ವ್ಯವಸ್ಥ್ಥಿತ ಆಡಳಿತಗಾರನೂ ಆದ, ಶಾಂತಿಪ್ರಿಯನೂ ಆದ, ಸರ್ವಧರ್ಮ ಸಮನ್ವಯಕಾರನೂ ಆದ, ಮೈಸೂರಿನ ರಕ್ಷಕನೂ ಆದ, ಸ್ವಾತಂತ್ರ್ಯ ಹೋರಾಟಗಾರನೂ ಆದ, ರಾಷ್ಟ್ರೀಯವಾದಿಯೂ ಆದ. ಇಂಥವನ ಜನ್ಮದಿನ ಕರ್ನಾಟಕದ ಅರುಣೋದಯದ ದಿನವೆಂದೂ ಬಲಿದಾನವನ್ನು ರಾಷ್ಟ್ರೀಯ ಹಬ್ಬವೆಂದೂ ಪ್ರತಿಪಾದಿಸುವ ಸೆಕ್ಯುಲರ್‌ವಾದಿಗಳು ವಿಪರೀತ ಹೆಚ್ಚಿದರು. ರಸ್ತೆ, ವೃತ್ತ, ಸೇತುವೆಗಳಿಂದ ಹಿಡಿದು ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಕ್ಕೂ ತನ ಹೆಸರಿಡಬೇಕೆಂಬ ಬೇಡಿಕೆ, ಹೋರಾಟಗಳು ಶುರುವಾದವು. ಅಕ್ಬರ, ಔರಂಗಜೇಬರು ಇತಿಹಾಸಕಾರರ , ರಾಜಕಾರಣಿಗಳ ಕೈಗೆ ಸಿಕ್ಕಿ ಮೂಲ ಸ್ವರೂಪ ಬದಲಿಸಿಕೊಂಡಂತೆ ಕರ್ನಾಟಕಕ್ಕೂ ಅಕ್ಬರ, ಔರಂಗಜೇಬನಂಥ ವ್ಯಕ್ತಿತ್ವ ಸಿಕ್ಕಿತ್ತು. ಅದೂ ಅಚಾನಕ್ಕಾಗಿ ಸಿಕ್ಕಿತ್ತು. ವೋಟ್‌ಬ್ಯಾಂಕ್ ರಾಜಕಾರಣಕ್ಕೆ ಇಂಥವನೊಬ್ಬನ ಆವಶ್ಯಕತೆ ಇತ್ತಾದರೂ ಅದಕ್ಕೆ ಮೈಸೂರಿನ ಅರಸರನ್ನು ಅಲ್ಲಗೆಳೆದು ಟಿಪ್ಪುವನ್ನು ತರುವ ಧೈರ್ಯವಿರಲಿಲ್ಲ. ಆದರೆ ಸುವರ್ಣಾವಕಾಶವೊಂದು ರಾಜಕಾರಣಕ್ಕೆ ಅನಾಯಾಸವಾಗಿ ಬಂದೊದಗಿತ್ತು.
ಇಷ್ಟೆಲ್ಲಾ ಶುರುವಾಗಿದ್ದು ಒಂದು ಪೊಲೀಸ್ ಸ್ಟೇಷನ್ನಿನಲ್ಲಿ ಎಂಬುದು ಸೋಜಿಗ ಮತ್ತು ಓರ್ವನ ಸ್ವಾರ್ಥಕ್ಕಾಗಿ ಎಂಬುದು ಮತ್ತೊಂದು ವಿಶೇಷ. ಟಿಪ್ಪು ರಾಜ್ಯಾದ್ಯಂತ ಇಷ್ಟೆಲ್ಲಾ
ಆವರಿಸಿಕೊಳ್ಳುತ್ತಿದ್ದಂತೆ ಆತನಿಂದ ನೊಂದವರು, ಆತನ ಪಾಪಕೃತ್ಯಗಳಿಗೆ ಬಲಿಯಾದವರು ಆತನ ಚರಿತ್ರೆಯನ್ನು ಕೆದಕುವ ಪ್ರಯತ್ನವನ್ನು ಕೂಡಾ ಮಾಡಿದರು. ಆಂಗ್ಲ ಸೇನಾಧಿಕಾರಿಗಳ ದಾಖಲೆಗಳನ್ನು ಶೋಧಿಸುವ ಕೆಲಸಗಳು ನಡೆದವು. ಕೆಲವು ಆಂಗ್ಲ ಪುಸ್ತಕಗಳು ಬಂದವು. ಅವುಗಳಲ್ಲಿ ಕೆಲವು ಕನ್ನಡಕ್ಕೂ ಅನುವಾದಗೊಂಡವು. ಸಂಶೋಧಕರು ಸತ್ಯವನ್ನು ನಿರ್ಭಯವಾಗಿ  ಮಂಡಿಸಿದರು. ಪತ್ರಕರ್ತರು ತಲೆ ಎತ್ತಿ ಸತ್ಯವನ್ನು ಬರೆದರು. ಭಾಷಣಕಾರರು ಸತ್ಯಕ್ಕೆ ಸಾವಿಲ್ಲ ಎಂದು ಟಿಪ್ಪು ನಿಜಸ್ವರೂಪವನ್ನು ಬಯಲು ಮಾಡತೊಡಗಿದರು. ಬಹುಭಾಷಾ ಲೇಖಕ, ಚಿಂತಕ ಐ.ಮಾ. ಮುತ್ತಣ್ಣನವರ “ಟೀಪು ಸುಲ್ತಾನ್ ಎಕ್ಸರೇಡ್”, ಡಿ.ಕೆ ಶರ್ಮಾರವರ “ದಿ ರಿಯಲ್ ಟೀಪು”, ಡಾ|ಚಿದಾನಂದ ಮೂರ್ತಿಯವರ “ಮೂಲ ದಾಖಲೆಗಳಲ್ಲಿ ಹುದುಗಿರುವ ಟಿಪ್ಪು”, ಪ್ರತಾಪ್ ಸಿಂಹರ “ಟಿಪ್ಪು ಸುಲ್ತಾನ ಸ್ವಾತಂತ್ರ್ಯ ವೀರನಾ?”, ಸಂದೀಪ್ ಬಾಲಕೃಷ್ಣರವರ “ಟಿಪ್ಪು ಸುಲ್ತಾನ್: ದಿ ಟೈರೆಂಟ್ ಆಫ್ ಮೈಸೂರ್” ಪುಸ್ತಕಗಳು ಟಿಪ್ಪುವಿನ ಕ್ರೌರ್ಯ, ಮತಾಂಧತೆ ಮತ್ತು ಜನದ್ರೋಹಿ ಕೆಲಸಗಳನ್ನು ತೆರೆದಿಟ್ಟಿತು. ನವಮಾಧ್ಯಮಗಳು ಬಂದಮೇಲಂತೂ ಟಿಪ್ಪು ವಿರುದ್ಧ ಚಳವಳಿಯೇ ನಡೆದವು. ಟಿಪ್ಪು ವೈಭವ ವಿಪರೀತವಾದಾಗಲೆಲ್ಲಾ ಇವು ತಮ್ಮ ಧ್ವನಿಯನ್ನು ಎತ್ತಿದವು.
ಆದರೆ ಟಿಪ್ಪು  ನಿಜಸ್ವರೂಪ ಹೊರಬಂದಿದ್ದು  ಆತನ ವೈಭವೀಕರಣಕ್ಕೆ ಪ್ರತಿರೋಧವಾಗಿಯೇ.ಅದಕ್ಕೂ ಹೊರತಾದ ಸತ್ಯ ಚರಿತ್ರೆಯ ಪುಟಗಳಲ್ಲಿದೆ. ಕೊಡಗಿನ ಐನ್ ಮನೆಗಳಲ್ಲಿದೆ. ಅದು ಮತ್ತಷ್ಟು ಪ್ರಭಾವಿಯಾಗಿ ಹೊರಬರಬೇಕಾಗಿದೆ. ಅದು ಸದ್ಯದ ತುರ್ತು ಕೂಡಾ. ಅದರ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
Tipu-Sultan-04ಟಿಪ್ಪುವಿಗಿಂತ ಮೊದಲು ಈ ರಾಜ್ಯದಲ್ಲಿ ಯಾರೊಬ್ಬನೂ ಸುವ್ಯವಸ್ಥಿತ ಆಡಳಿತವನ್ನು ಮಾಡಿರಲಿಲ್ಲ, ಅಂಥ ಆಡಳಿತಗಾರನೇ ಇರಲಿಲ್ಲ ಎಂಬ ಅತಿಶಯ ರೂಪಕ-ವಿಶ್ಲೇಷಣೆಗಳಿಂದ ಹೊಗಳಲ್ಪಡುತ್ತಿರುವ ಟಿಪ್ಪು ಸುಲ್ತಾನ ಅಸಲಿಗೆ ಯಾರು? ಆತ ರಾಜನೋ? ಅಲ್ಲವೋ? ರಾಜನಾಗಿದ್ದರೆ ಯಾವ  ರಾಜಮನೆತನದವನಾಗಿದ್ದ? ಆತ ರಾಷ್ಟ್ರೀಯವಾದಿಯೇ? ಸ್ವಾತಂತ್ರ್ಯ ಹೋರಾಟಗಾರನೇ? ಎಂಬುದೆಲ್ಲಾ ಅನಂತರದ ಪ್ರಶ್ನೆ. ಆತನ ವಂಶಾವಳಿಯನ್ನು ಅರಿಯುವುದು ಟಿಪ್ಪು  ಚಿರಿತ್ರೆಯನ್ನು ಹೇಳುವಲ್ಲಿ ಮೊದಲಿಗೆ ಆಗಬೇಕಾದ ಕಾರ್ಯ. ಏಕೆಂದರೆ ಮಹಾನ್ ಅರಸನಾಗಿರುವವನೊಬ್ಬನ ಹಿನ್ನೆಲೆ ಒಂದೋ ಧ್ಯೇಯಮಾರ್ಗದ್ದಾಗಿರಬೇಕು ಇಲ್ಲವೇ ಆತ ಮಹಾಪ್ರತಿಭಾವಂತನೋ, ಶೌರ್ಯವಂತನೋ ಆಗಿರಬೇಕು. ಹಾಗೆಯೇ ಟಿಪ್ಪು ಹಿನ್ನೆಲೆ ಇವೆರಡರಲ್ಲಿ ಒಂದು ಆಗಿರಬೇಕಿತ್ತು. ಆದರೆ ಆತನ ಹಿನ್ನ್ನೆಲೆಯೇ ಭಯಂಕರವಾದುದು. ಅಂದರೆ ಆತನ ಅಪ್ಪನೇ ಸಂಸ್ಕಾರಹೀನ ಮತ್ತು ಉಂಡ ಮನೆಗೆ ಎರಡು ಬಗೆಯುವ ಬುದ್ಧಿಯವನಾಗಿದ್ದ. ಇಂಥವನ ಬೀಜಕ್ಕೆ ಹುಟ್ಟಿದವ ಟಿಪ್ಪು ಇನ್ನು ಹೇಗಿರಲು ಸಾಧ್ಯ?
ಅಷರಾಫ್ ಷಾ ಎಂಬ ಅರಬ್ಬೀ ಸಂಸಾರಸ್ಥನೊಬ್ಬ  ತನ್ನ ತುಂಬು ಕುಟುಂಬದೊಡಗೂಡಿ ಭಾರತಕ್ಕೆ ವಲಸೆ ಬಂದ. ಆ ವಲಸೆ ವ್ಯಾಪಾರಿ ಸಂಬಂಧಿತವಾಗಿತ್ತೋ ಅಥವಾ ಹೊಟ್ಟೆಪಾಡಿನದಾಗಿತ್ತೋ ತಿಳಿಯದು. ಆದರೆ ಆತ  ಬಿಜಾಪುರದ ಸುಲ್ತಾನನ ಬಳಿ ಕೂಲಿಗೆ ನಿಂತದ್ದಕ್ಕೆ ಉಲ್ಲೇಖಗಳಿವೆ. ಕೂಲಿ ಮಾಡುತ್ತಿದ್ದ ಆ ಸಂಸಾರ ಅಲ್ಲೇ ಬೆಳೆಯತೊಡಗಿತು. ಈ ಕುಟುಂಬದ ಒಂದು ಶಾಖೆ ಅಲ್ಲಿ ಹೊಟ್ಟೆಗೆ ಸಾಲದೆ ಕೋಲಾರಕ್ಕೆ ಬಂದು ಬೀಡುಬಿಟ್ಟಿತು. ಗಂಡ, ಹೆಂಡತಿ ಮತ್ತು ಮೂರು ಗಂಡುಮಕ್ಕಳಿದ್ದ ಆ ಕುಂಟುಂಬ ಕೋಲಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಆತನ ಹೆಂಡತಿ ಮಡಿದಳು. ಆಕೆಯ ಗೋರಿಯನ್ನು ಅಲ್ಲೇ ಮಾಡಿದ ಯಜಮಾನ ಮಕ್ಕಳನ್ನು ಕಟ್ಟಿಕೊಂಡು ಊರೂರು ಅಲೆಯುತ್ತಿದ್ದ. ಮಕ್ಕಳು ದೊಡ್ಡವರಾಗುತ್ತಿದ್ದರು. ಇವರಲ್ಲಿ ಹಿರಿಯ ಮಗ ಮಹಮದ್ ಫತುಲ್ಲಾ ಸಾಬಿಯು ಸೀರ‍್ಯ (?)ಎಂಬಲ್ಲಿ  ನವಾಬನ ಕೆಳಗೆ ಕೂಲಿಗೆ ನಿಂತನು. ಇವನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರಲ್ಲಿ  ಹಿರಿಯವ ಸಾಬಸ್ಸಾಬಿ, ಕಿರಿಯವ ಹೈದರಾಲಿ. ಸೀರ‍್ಯದ ನವಾಬನಲ್ಲಿ ಕೂಲಿಗಿದ್ದ ಮಹಮದ್ ಫತುಲ್ಲಾಸಾಬಿ ಯಾನೆ ಫತ್ತೇನಾಯಕ ಊರಿಡೀ ಸಾಲ ಮಾಡಿ ಒಂದು ದಿನ ಸತ್ತ. ಸಾಲದ ಹೊರೆ ಮಕ್ಕಳ ಮೇಲೆ ಬಿತ್ತು. ಅವರು ದಾರಿ ಕಾಣದೆ ಫತುಲ್ಲಾನ ಮೂರನೇ ತಮ್ಮ ಅಂದರೆ ದೊಡ್ಡಬಳ್ಳಾಪುರದ ಪಾಳೇಗಾರನ ಬಳಿ ಚಾಕರಿಗಿದ್ದ ಗುಲಾಂ ಸಾಬಿಯ ಕಾಲಿಗೆ ಬಿದ್ದರು. ಆದರೆ ಗುಲಾಂ ಸಾಬಿ ತನ್ನ ಅಣ್ಣನ ಮಕ್ಕಳ ಸ್ಥಿತಿಯನ್ನು ಕೇಳಿ ತನ್ನದೂ ಕೂಡಾ ಅದೇ ಪರಿಸ್ಥಿತಿ ಎಂದು ಕೈಯಾಡಿಸಿಬಿಟ್ಟ. ಮತ್ತು ತನ್ನ ಮತ್ತೊಬ್ಬ ಅಣ್ಣ ಗುಲಾಂ ಹೈದರಾಲಿಯ ಬಳಿ ಸಹಾಯ ಸಿಗಬಹುದೆಂದು ಅವರನ್ನು ಆತನ ಬಳಿಗೆ ಕರೆದೊಯ್ದ. ಆತ ಶ್ರೀರಂಗಪಟ್ಟಣಕ್ಕೆ ಸೇರಿದ ಮದ್ದಗಿರಿ ಎಂಬಲ್ಲಿನ ಪಾಳೇಗಾರನಲ್ಲಿ ಕೂಲಿಗೆ ನಿಂತಿದ್ದ. ಒಟ್ಟು ಕುಟುಂಬವೇ ಕೂಲಿಯವರಾಗಿದ್ದರು. ತನ್ನ ದೊಡ್ಡಣ್ಣನ ಮಕ್ಕಳ ಪರಿಸ್ಥಿತಿಗಳನ್ನೆಲ್ಲಾ ಕೇಳಿದ ಗುಲಾಂ ಹೈದರಾಲಿ ತನ್ನ ಒಡೆಯ ಪಾಳೇಗಾರ ಮಲ್ಲರಾಜಯ್ಯನ ಕಾಲಿಗೆ ಬಿದ್ದು  ಸಾಲವನ್ನು ತೀರಿಸಬೇಕೆಂದೂ ಪ್ರತಿಯಾಗಿ ಇವರು ಜೀವನಪರ‍್ಯಂತ ತಮ್ಮ ಚಾಕರಿ ಮಾಡುತ್ತಾರೆಂದೂ ನಿವೇದಿಸಿಕೊಂಡ. ಗುಲಾಮರ ಆವಶ್ಯಕತೆ ಇದ್ದ ಪಾಳೆಗಾರ ಸಾಲವನ್ನು ತೀರಿಸಿ ಹೈದರಾಲಿ ಮತ್ತು ಸಾಬಸ್ಸಾಬಿಯನ್ನು ಜೀತಕ್ಕಿಟ್ಟುಕೊಂಡ. ನಮ್ಮ ರಾಜ್ಯದ ಬುದ್ಧಿಜೀವಿಗಳ ಆರಾಧ್ಯ ದೈವ ಟಿಪ್ಪು ಸುಲ್ತಾನ್ ಇಂಥ ರಾಯಲ್ ಫ್ಯಾಮಿಲಿಯವನು!
ಅದು ೧೮ನೇ ಶತಮಾನದ ಮಧ್ಯಭಾಗ. ಶ್ರೀರಂಗಪಟ್ಟಣ ಮತ್ತು ಮೈಸೂರು ಸೀಮೆಗಳ ಆಡಳಿತಗಾರರಲ್ಲಿ ಅಂತಃಕಲಹ, ಒಳಜಗಳ, ಸಂಚುಗಳು ಶುರುವಾಗುತ್ತಿದ್ದವು. ಅದೇ ಹೊತ್ತಿನಲ್ಲಿ ಹೈದರಾಲಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಉಂಟಾದ ಉಪಟಳವನ್ನು ನಿಭಾಯಿಸಲು ಶ್ರೀರಂಗಪಟ್ಟಣದಿಂದ ಕಳುಹಿಸಿದ ತಂಡದಲ್ಲಿ ಒಬ್ಬನಾಗಿದ್ದ. ಮುಸಲ್ಮಾನರಲ್ಲಿ ಹುಟ್ಟುತ್ತಲೇ ಬಂದಿರುವ ಅಧಿಕಪ್ರಸಂಗ ಬುದ್ಧಿಯಿಂದ ಹೈದರಾಲಿ ಆ ತಂಡದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟ. ಅವರ ಗೂಂಡಾ ಪ್ರವೃತ್ತಿಯಿಂದ ಯುದ್ಧದಲ್ಲಿ ಅತೀ ಹೆಚ್ಚಿನ ಕ್ರೌರ್ಯವನ್ನು ಆತ ಪ್ರದರ್ಶಿಸಿದ. ೧೭೪೬ರ ಹೊತ್ತಿಗೆ ದೇವನಹಳ್ಳಿ ಶಾಂತ ಸ್ಥಿತಿಗೆ ಬಂದಿತ್ತು. ಮುಂದಿನ ವರ್ಷ ಮೊಗಲರ ವಜೀರ ನಾಸರಜಂಗನಿಗೂ ಆರ್ಕಾಟಿನ ನವಾಬನಿಗೂ ಯುದ್ಧ ನಡೆದಾಗ ಕಳುಹಿಸಲ್ಪಟ್ಟ ಶ್ರೀರಂಗಪಟ್ಟಣದ ದಂಡಿನಲ್ಲೂ ಹೈದರಾಲಿ ಇದ್ದ. ಹೈದರನಿಗೆ ಯಾವ ಹೊಣೆಯೂ ಇಲ್ಲದಿದ್ದರೂ ಅಧಿಕಾರವಿಲ್ಲದಿದ್ದರೂ ಯುದ್ಧರಂಗದಲ್ಲಿ ಆತನ ಕಪಟ ಬುದ್ಧಿ ಸೇನೆಯ ಮುಖ್ಯಸ್ಥರಿಗೂ ಪ್ರಯೋಜನಕ್ಕೆ ಬಂತು. ನಾಸರಜಂಗನನ್ನು ಲೂಟಿ ಮಾಡುವ ಯೋಜನೆಯನ್ನೇ ಈತ ಕೊಟ್ಟಿದ್ದ. ಅದು ಯಶಸ್ವಿಯೂ ಆಯಿತು. ಮತ್ತು ಅಷ್ಟರಲ್ಲಾಗಲೇ ಹೈದರನ ಒಂದು ಗುಂಪು ಸಿದ್ಧವಾಗಿತ್ತು. ಈ ಗುಂಪು ನಾಸರಜಂಗನ ೧೫ ಒಂಟೆಗಳು ಮತ್ತು ಅವುಗಳ ಮೇಲಿದ್ದ ಸಂಪತ್ತಿನ ಹೊರೆಯನ್ನು ಲೂಟಿ ಹೊಡೆಯಿತು. ಕುಟಿಲ ಹೈದರಾಲಿ ಅದನ್ನು ನ್ಯಾಯೋಚಿತವಾಗಿ ದಳವಾಯಿಗೆ ಒಪ್ಪಿಸಬೇಕಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ತಾನೇ ದೊರೆಗಳಿಗೆ ಅದನ್ನು ಮುಟ್ಟಿಸಿ ಬಂದ. ಆತನ ಪ್ರಾಮಾಣಿಕತೆ ಮತ್ತು ಶೌರ್ಯಕ್ಕೆ ತಲೆದೂಗಿದ ದೊರೆಗಳು ಸಮ್ಮಾನ, ಪ್ರಶಸ್ತಿಗಳನ್ನು ನೀಡಿದ್ದಲ್ಲದೆ ೧೫ ಒಂಟೆ ಹೊರೆಗಳಲ್ಲಿ ಹನ್ನೆರಡನ್ನು  ತಾವಿಟ್ಟುಕೊಂಡು ಉಳಿದ ಮೂರನ್ನು ಹೈದರನಿಗೆ ಕೊಟ್ಟರು. ಹೈದರನಿಗೆ ಯಾರ್ಯಾರನ್ನು ಎಲ್ಲೆಲ್ಲಿ ಮೀಟಬೇಕು ಎಂದು ತಿಳಿದಿತ್ತು. ಮತ್ತು ಆರ್ಕಾಟ್ ಯುದ್ಧದಲ್ಲಿ ಉಳಿದ ಯೋಧರ ಮಹತ್ತ್ವ ಕಡಿಮೆ ಮಾಡಿ ತಾನೊಬ್ಬನೇ ಗುರುತಿಸಲ್ಪಡಬೇಕು ಎಂದು ಎಣಿಸಿದ್ದ. ಮಹಾರಾಜರ ಅಂತರಂಗ ಪ್ರವೇಶಿಸಲು ಸುಸಂದರ್ಭವನ್ನಾಗಿ ಅದನ್ನು ಬಳಕೆ ಮಾಡಿಕೊಂಡ. ವಾಸ್ತವವಾಗಿ ಮೈಸೂರು ಸಂಸ್ಥಾನದ ಬುಡ ಅಂದೇ ಅಲ್ಲಾಡಿತ್ತು.
ಈ ಘಟನೆಯ ತರುವಾಯ ಹೈದರನ ಅಸ್ತಿತ್ವ ಬಲವಾಗತೊಡಗಿತು. ಆತ ತನ್ನನ್ನು ತಾನು ಅರಮನೆಗೆ ನಂಬಿಗಸ್ಥನಂತೆ ಹೆಚ್ಚುಹೆಚ್ಚು ಬಿಂಬಿಸಿಕೊಳ್ಳತೊಡಗಿದ.ಎಲ್ಲಾ ಅವಕಾಶಗಳನ್ನು ಹೈದರ್ ಬಳಸಿಕೊಂಡ. ಅದೇ ಹೊತ್ತಲ್ಲಿ ಮಹಾರಾಜರ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬ ನೆಪ ಒಡ್ಡಿ ಚಂದಾಸಾಹೆಬ್ ಮತ್ತು ದಿವಾನ್ ಶೇಷಗಿರಿ ಎಂಬವರನ್ನು ಕರೆಸಿ ಮೋಸದಿಂದ ತಲೆಕತ್ತರಿಸಿ ಅದನ್ನು ಅರಮನೆಗೆ ಕಳುಹಿಸಿಕೊಟ್ಟ. ಹಿತ್ತಾಳೆ ಕಿವಿಯ ಅರಸರು ಇದರಿಂದ ಸಂತುಷ್ಟರಾಗಿ ಆ ತಲೆಗಳನ್ನು ಅರಮನೆಯ ದ್ವಾರದಲ್ಲಿ ತೋರಣ ಕಟ್ಟಿಸಿದ್ದರು. ಇದು ಹೈದರನ ಖದರನ್ನು ಮತ್ತೂ ಹೆಚ್ಚು ಮಾಡಿತು. ಜನರು ಹೈದರ್ ಎಂದರೆ ಹೆದರುವಂತಾದರು. ಸರಿಯಾಗಿ ಇದೇ(೧೭೫೫)ಸಮಯದಲ್ಲಿ ಚೆನ್ನಪಟ್ಟಣದಲ್ಲಿ ಸಂಬಳಕ್ಕಾಗಿ ಖ್ಯಾತೆ ತೆಗೆಯುತ್ತಿದ್ದ ಸೈನಿಕರಿಗೆ ಹೈದರ್ ತಾನೇ ಕಿಸೆಯಿಂದ ಸಂಬಳವನ್ನು ಕೊಟ್ಟ. ಅತ್ತ ತಿರುಚನಾಪಳ್ಳಿಯಲ್ಲಿ ನಡೆಯುತ್ತಿದ್ದ ಗಲಭೆ ಅಡಗದೆ ಇರಲು ಹೈದರ್ ತಾನೇ ಹೆಚ್ಚುವರಿ ಪಡೆಗಳನ್ನು ಅಲ್ಲಿ ಕಟ್ಟಿದ. ಮತ್ತು ಸಂಬಳವನ್ನು ತಾನೇ ಪಾವತಿಸಿದ. ಇವನ್ನೆಲ್ಲಾ ಮಹಾರಾಜರು ಗಂಭೀರವಾಗಿ ಪರಿಗಣಿಸುವ ಬದಲು ಹೈದರನ ಸ್ವಾಮಿನಿಷ್ಠೆಯನ್ನು ಹೊಗಳತೊಡಗಿದರು. ಅವರು ಹೈದರಾಲಿಯನ್ನು ಎಷ್ಟೊಂದು ನಂಬಿದ್ದರೆಂದರೆ ಆತನಗೆ ಱಬಹಾದ್ದೂರ್‌ೞ ಎಂಬ ಬಿರುದನ್ನು ಕೂಡಾ ದಯಪಾಲಿಸಿದರು. ಈರೋಡು, ಸತ್ಯಮಂಗಲ, ಧಾರಾಪುರ ಮತ್ತು ದಿಂಡಿಗಲ್ಲು ಸೀಮೆಯ ಕೆಲವು ಊರುಗಳನ್ನೇ ಬರೆದುಕೊಟ್ಟು ಸರಕಾರದ ಕೆಲಸಕ್ಕೆ ಕರೆದಾಗ ಬರಬೇಕೆಂದು ನಿರೂಪವನ್ನು ಬರೆಸಿದರು. ಅದು ೧೭೫೫ರ ಕೊನೆ. ಮುಂದಿನ ಮಹಾ ಆಪತ್ತು ಅಂದಿನಿಂದಲೇ ಆರಂಭವಾಗಿತ್ತು. ಆದರೂ ಮಹಾರಾಜರ ಸಂಪೂರ್ಣ ಅಧಿಕಾರವನ್ನು ಹೈದರಾಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿಲ್ಲ. ನೋಡನೋಡುತ್ತಲೇ ರಾಜ ಹೈದರನನ್ನು ಅವಲಂಭಿಸಿದ್ದರು. ಹೈದರನನ್ನು ನಂಬಿ ನಿರಾಳವಾಗಿದ್ದರು.
ಇದರ ನಡುವೆ  ರಾಜ ಮನೆತನದ ದಳವಾಯಿಯೂ ಆಗಿದ್ದ ದೇವರಾಜಯ್ಯ ಎಂಬವನೊಬ್ಬ ಹೈದರಾಲಿಯ ಮೇಲೆ ಒಂದು ಕಣ್ಣಿಟ್ಟೇ ಇದ್ದ. ಮತ್ತು ಅದನ್ನು ಮಹಾರಾಜರಿಗೆ ಹೇಳಿಯೂ ಇದ್ದ. ಆದರೆ ಹೈದರನ ಬಗ್ಗೆ  ಕುರುಡು ವ್ಯಾಮೋಹಿಯಾಗಿದ್ದ ರಾಜರು ದೇವರಾಜಯ್ಯನನ್ನೇ ಶಂಕಿಸಿದರು. ಹೈದರನಿಗೆ ಬಿಟ್ಟುಕೊಟ್ಟ ಸತ್ಯಮಂಗಲದ ಮೇಲೆ ಈತನಿಗೆ ಕಣ್ಣಿದೆ ಎಂದುಕೊಂಡರು. ಆಧುನಿಕ ಸೆಕ್ಯುಲರಿಸಂ ಸೃಷ್ಟಿಸುವ ಎಲ್ಲಾ ಭ್ರಮೆಗಳೂ ರಾಜರನ್ನು ಆವರಿಸಿತ್ತು. ರಾಜರಿಗೂ ದೇವರಾಜಯ್ಯನಿಗೂ ಮನಸ್ತಾಪ ಬೆಳೆದಿದೆ ಎಂಬುದನ್ನು ಮನಗಂಡ ಹೈದರಾಲಿ ಸತ್ಯಮಂಗಲದಲ್ಲೇ ಇದ್ದ ದೇವರಾಜಯ್ಯನನ್ನು ಶ್ರೀರಂಗಪಟ್ಟಣಕ್ಕೆ ಮಾತುಕತೆಗೆಂದು ಕರೆದೊಯ್ದ ಮತ್ತು ರಾಜನಲ್ಲಿ ಕ್ಷಮೆಯನ್ನು ಕೇಳಿಸಿದ. ಕೆಲವು ದಿನಗಳು ಶ್ರೀರಂಗಪಟ್ಟಣದಲ್ಲೇ ಉಳಿದ ದೇವರಾಜಯ್ಯ ಮರಳಿ ಸತ್ಯಮಂಗಲಕ್ಕೆ ಹೊರಟ. ಆದರೆ ದಾರಿಯಲ್ಲೇ ದೇವರಾಜಯ್ಯ ನಿಗೂಢವಾಗಿ ಸತ್ತ. ಈ ಸಾವಿನ ಕುರಿತು ರಾಜರೂ ಪರಿವಾರವೂ ತಲೆಕೆಡಿಸಿಕೊಳ್ಳಲಿಲ್ಲ. ರಾಜರಿಗೆ ಎಚ್ಚೆತ್ತುಕೊಳ್ಳಲು ಇದೂ ಒಂದು ಅವಕಾಶವಾಗಿತ್ತು. ಅದಾದ ಕೆಲದಿನಗಳಲ್ಲಿ ಪುನಃ ಸೇನೆಯಲ್ಲಿ ಸಂಬಳದ ವಿಷಯವಾಗಿ ದಂಗೆ ಪ್ರಾರಂಭವಾಯಿತು. ರಾಜರು ದಂಗೆಯನ್ನು ನಿಭಾಯಿಸಲು ಹೈದರನಿಗೆ ಹೇಳಿ ಕಳುಹಿಸಿದರು. ಆದರೆ ಶ್ರೀರಂಗಪಟ್ಟಣಕ್ಕೆ ಬಂದ ಹೈದರ ವರಸೆ ಬದಲಿಸಿ ಮಾತಾಡಿದ. “ಮಹಾರಾಜರೇ ನಾನೊಬ್ಬ ಸಾಮಾನ್ಯ ಸೇವಕ. ನಾನು ಇಂಥ ದೊಡ್ಡ ಕೆಲಸವನ್ನು  ಮಾಡಿದರೆ ವ್ಯರ್ಥಾ ರಾಜಪರಿವಾರ ಮತ್ತು ಅರಮನೆಯ ಜನಗಳ ಕೆಂಗಣ್ಣಿಗೆ ಪಾತ್ರನಾಗುತ್ತೇನೆ. ಜನಗಳು ಆಡಿಕೊಳ್ಳುತ್ತಾರೆ. ನನ್ನನ್ನು ಕ್ಷಮಿಸಬೇಕು” ಎಂದು ವಿನಮ್ರದ ವೇಷ ಹಾಕಿದ. ಆದರೆ ರಾಜರು ಅದಕ್ಕೂ  ಮರುಳಾದರು. ಮತ್ತು “ನಿನ್ನ ಮೇಲೆ ನಮ್ಮ ಕೃಪಾಕಟಾಕ್ಷವು ಸಂಪೂರ್ಣವಾಗಿದೆ. ಕ್ಷುದ್ರಶಕ್ತಿಗಳಿಂದ ನಿನಗೇನೂ ಆಗಲಾರದು. ಈಗ ನಾನು ಮಾಡುವ ಕಾರ್ಯವನ್ನೇ ನೀನು ಮಾಡು” ಎಂದು ಆಜ್ಞಾಪಿಸಿದರು. ಹೀಗೆ ಆಜ್ಞಾಪಿಸಿದ ಮಹಾರಾಜರು ಮೈಸೂರು ಸಂಸ್ಥಾನಕ್ಕೆ ಮೊದಲ ವೊಳೆಯನ್ನು ತಾವೇ ಹಾಕಿಬಿಟ್ಟಿದ್ದರು. ಅಂದಿನಿಂದ ಅಂದರೆ ೧೭೫೮ರಲ್ಲಿ ಹೈದರಾಲಿ ದಳವಾಯಿಯಾದನು. ದಂಗೆ ಇದ್ದಕ್ಕಿದ್ದಂತೆ ಅಡಗಿತು. ಆದರೂ ಮಹಾರಾಜರಿಗೆ ಇದರಲ್ಲೇನೋ ಹುನ್ನಾರವಿದೆ ಎಂದು ಅನಿಸಲೇ ಇಲ್ಲ. ಹೈದರ ತನ್ನ ಗೆಳೆಯನಿಗೆ ದಿವಾನಗಿರಿಯನ್ನು ಕೊಡುವಂತೆ ಮಹಾರಾಜರನ್ನು ಒಪ್ಪಿಸಿದ. ಅಲ್ಲಿಂದ ಹೈದರ ತನ್ನ ಅಸಲೀ ಅಧಿಕಾರವನ್ನು ನಡೆಸಲು ಆರಂಭಿಸಿದ. ಅಧಿಕಾರಿ ವರ್ಗವನ್ನು ಹೆದರಿಸಿದ. ಇನ್ನು ಕೆಲವರನ್ನು ಹೊಗಳಿ ನಯವಾಗಿ ಒಲಿಸಿಕೊಂಡ. ರಾಜಧಾನಿಯ ೪ ಸಾವಿರ ಕುದುರೆಗಳಲ್ಲಿ ೩ ಸಾವಿರ ಕುದುರೆಗಳನ್ನು ಖಾಯಂ ಆಗಿ ಇಡಲು ಆಜ್ಞೆ ಮಾಡಿ ಉಳಿದ ೧ ಸಾವಿರ ಕುದುರೆಗಳನ್ನು ತನ್ನ ಜನರಿಗೆ ಒಪ್ಪಿಸಿದ.
ಹೈದರಾಲಿ ರೂಪುಗೊಂಡಿದ್ದು ಆ ಒಂದು ಸಾವಿರ ಕುದುರೆಗಳಿಂದ.
ಆ ಕುದುರೆಗಳನ್ನಿಟ್ಟುಕೊಂಡು ಹೈದರಾಲಿ ಸಾಮ್ರಾಜ್ಯವನ್ನು ಕ್ರಮೇಣ ಹಿಡಿತಕ್ಕೆ ತರತೊಡಗಿದ. ಅದರಲ್ಲಿ ಬಹುಪಾಲು ಸೈನಿಕರು ಮುಸಲ್ಮಾನರೇ ಇರುವಂತೆ ನೋಡಿಕೊಂಡ. ಮತ್ತು ಲೂಟಿಯನ್ನೇ ಮಾಡತೊಡಗಿದ. ಇಸ್ಲಾಮಿನಲ್ಲಿ ಲೂಟಿಯೂ ಒಂದು ಮತೀಯ ಕಾರ್ಯವಾದುದರಿಂದ ಆ ಲೂಟಿ ಅತೀ ಕ್ರೂರತೆಯಿಂದ ಕೂಡಿರುತ್ತಿತ್ತು. ಲೂಟಿಯಲ್ಲಿ ಕಾಫಿರರ ಹತ್ಯೆ ಆರಂಭವಾಗಿದ್ದೂ ಕೂಡಾ ಇದೇ ಹೊತ್ತಲ್ಲಿ. ಆರಂಭದಲ್ಲಿ ತೀರ್ಥಯಾತ್ರಿಗಳನ್ನು  ಲೂಟಿ ಮಾಡುತ್ತಿದ್ದರೆ ಅನಂತರ ಊರೂರನ್ನೇ ಲೂಟಿ ಮಾಡಲಾಗುತ್ತಿತ್ತು. ಒಂದು ಸಾವಿರ ಕುದುರೆಗಳು ಸಂಪತ್ತನ್ನು ಶೇಖರಿಸತೊಡಗಿದವು. ಹೀಗೆ ಶೇಖರಿಸಿದ ಸಂಪತ್ತನ್ನು ಹೈದರಾಲಿ ಕೋಟೆಯ ರಹಸ್ಯ ತಾಣದಲ್ಲಿರಿಸಿ ಮುಸಲ್ಮಾನ ಸರದಾರನೊಬ್ಬನನ್ನು ಅದರ ರಕ್ಷಣೆಗೆ ನೇಮಿಸಿದ.
ದಳವಾಯಿ ಹೈದರಾಲಿ ಈಗ ಹೈದರಾಲಿ ಖಾನ್ ಎಂಬುದಾಗಿ ಖ್ಯಾತನಾದ. “ಮೈಸೂರಿನ ಹುಲಿ”ಯ ಪಿತಾಶ್ರೀಯೂ ಶೂರನೂ ರನೂ ಎಂದೆಲ್ಲಾ ಹೊಗಳಲ್ಪಡುವ ಈತನ ಪೂರ್ವಪರ ಹೇಗಿತ್ತು ಎನ್ನುವುದು ಇತಿಹಾಸದಲ್ಲಿ ಮರೆಯಾಗಿರುವ ಸಂಗತಿ. ರಾಜನನ್ನು ಮರಳು ಮಾಡಿ ಆತನ ಅಂತರಂಗದ ಮನುಷ್ಯನಾಗಿದ್ದ ಮಾತ್ರಕ್ಕೆ ಆತನ ದರೋಡೆಕೋರತನ ಮಾಯವಾಗಿಹೋಗುವುದೇನೂ ಇಲ್ಲ. ಹೈದರಾಲಿಯನ್ನು ದರೋಡೆಕೋರ ಎನ್ನಲು ಸಾಧ್ಯವಿಲ್ಲ ಎನ್ನುವುದಾದರೆ ಹಿಟ್ಲರನನ್ನೂ ಕ್ರೂರಿ ಎನ್ನಲೂ ಸಾಧ್ಯವಾಗುವುದಿಲ್ಲ. ಭೂಗತ ಪಾತಕಿಗಳು ನರಸತ್ತ ಮೇಲೆ ಸಂಘಟನೆಗಳನ್ನು ಕಟ್ಟಿಕೊಂಡು ಜನಸೇವೆಯ ವೇಷ ಹಾಕಿದರೆ ಅವರ ಪಾಪ ಕೃತ್ಯಗಳೇನು ಮಾಸಿಹೋಗುತ್ತವೆಯೇ? ಆದರೂ ನಮ್ಮ ಪಾಠ ಪುಸ್ತಕಗಳು ಈ ತರ್ಕದಿಂದ ಹೈದರನನ್ನು ನೋಡದೆ ಆತನನ್ನು ಮೈಸೂರನ್ನು ರಕ್ಷಿಸಿದವನು ಎಂದೇ ಸಾರುತ್ತಿವೆ. ಆತ ಮರಾಠರ ದಾಳಿಯನ್ನು ಎದುರಿಸಿ ಮೈಸೂರು ಸಂಸ್ಥಾನವನ್ನು ರಕ್ಷಣೆ ಮಾಡಿದ ಎಂಬ ಪಠ್ಯಗಳು ಇಂದೂ ಪ್ರಾಥಮಿಕ ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೂ ಇವೆ. ವಾಸ್ತವವೆಂದರೆ ಆತ ಮರಾಠರನ್ನು ಎದುರಿಸುವಷ್ಟು ಪರಾಕ್ರಮಿಯೇನೂ ಆಗಿರಲಿಲ್ಲ. ಆತನ ಒಂದು ಸಾವಿರ ಕುದುರೆಗಳು ದರೋಡೆಯನ್ನು ಮಾಡಬಹುದಿತ್ತೇ ಹೊರತು ಪ್ರಬಲ ಮರಾಠರನ್ನು ಎದುರಿಸುವ ಶಕ್ತಿಯನ್ನೇನೂ ಹೊಂದಿರಲಿಲ್ಲ. ಹೈದರಾಲಿಯಿಂದ ಮರಾಠರು ಸೋಲುತಿದ್ದರೆ ಮರಾಠರು ಆಗಾಗ್ಗೆ ದಾಳಿ ಮಾಡುತ್ತಲೇ ಇರಲಿಲ್ಲ. ಹೈದರನ “ಶೌರ್ಯ”ವನ್ನು ಚೆನ್ನಾಗಿಯೇ ತಿಳಿದಿದ್ದ ಮರಾಠ ಸರದಾರ ಮಿರ್ಜಿ ಗೋಪಾಳರಾವ್ ಆತನನ್ನು ಚೆನ್ನಾಗಿಯೇ ಬಳಸಿಕೊಂಡ. ಭೃಹತ್ ದಂಡಿನೊಡನೆ ಬರುವುದು ಮತ್ತು ದೊಡ್ಡ ಮೊತ್ತಕ್ಕೆ ಬೇಡಿಕೆಯನ್ನಿಡುವುದು ಮಾಡುತ್ತಲೇ ಬಂದ ಗೋಪಾಳರಾವ್ ಸಂಸ್ಥಾನದ ಹಣವನ್ನು ಹೈದರನ ಕೈಯಿಂದ ಸಾಕಷ್ಟು ಖಾಲಿ ಮಾಡಿಸಿದ್ದ. ಪ್ರತೀ ಬಾರಿಯೂ ಮರಾಠರು ಹೈದರನಿಗೆ ಚೆನ್ನಪಟ್ಟಣ ಅಥವಾ ಬೆಂಗಳೂರನ್ನು ಬಿಟ್ಟುಕೊಡಬೇಕು ಇಲ್ಲವೇ ಇಂತಿಷ್ಟು ಕಪ್ಪವನ್ನು ಒಪ್ಪಿಸಬೇಕು ಎಂಬ ಷರತ್ತನ್ನು ಇಡುತ್ತಿದ್ದರು. ಮರಾಠರಿಗೆ ಆ ಪ್ರದೇಶಗಳನ್ನು ಕಟ್ಟಿಕೊಂಡು ಏಗುವುದಕ್ಕಿಂತ ಕಪ್ಪವೇ ಲಾಭವಾಗಿತ್ತು. ಒಂದರ್ಥದಲ್ಲಿ  ಶ್ರೀರಂಗಪಟ್ಟಣದ ತಿಜೋರಿ ಮರಾಠರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು. ಹೈದರ ಖಜಾನೆ ಯಾರಪ್ಪನ ಗಂಟು ಎಂಬಂತೆ ತಂದೂತಂದೂ ಮರಾಠರ ಪಾದಕ್ಕೆ ಸುರಿಯುತ್ತಿದ್ದ.
ಇಷ್ಟ್ಟೆಲ್ಲಾ ಆದರೂ ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರು ಹೈದರನಿಂದಲೇ ಸಾಮ್ರಾಜ್ಯ ಮರಾಠರ ಕೈವಶವಾಗುವುದು ತಪ್ಪಿತು ಎಂದೇ ಹೇಳುತ್ತಿದ್ದರು. ಒಂದು ದಿನ ರಾಜರು ಆತನನ್ನು ಅರಮನೆಗೆ ಕರೆಸಿ ಹೈದರಾಲಿ ಖಾನ್ ನವಾಬ್ ಎಂಬುದಾಗಿ ಹೆಸರಿಟ್ಟು ಆನೆ ಕುದುರೆಗಳನ್ನು ನೀಡಿ ಇನ್ನು ಮುಂದೆ ಸರದಾರರೆಲ್ಲರೂ ಆತನಿಗೆ ನಡೆದುಕೊಳ್ಳಬೇಕೆಂದು ಕಟ್ಟಪ್ಪಣೆಯನ್ನು ಹೊರಡಿಸಿದರು.
ಅರಮನೆಯಿಂದ ಹೂವಿನ ಹಾರಗಳನ್ನೂ ವೀಳ್ಯವನ್ನೂ ಪಡೆದು ಬಂದ ಹೈದರಾಲಿಯು ಮೊಟ್ಟಮೊದಲು ಮಾಡಿದ ಕೆಲಸವೆಂದರೆ ಅರಮನೆಯ ನಿಷ್ಟಾವಂತ ಸೇವಕರಾಗಿದ್ದ ಖಂಡೇರಾವ್ ಮತ್ತು ದಳವಾಯಿ ನಂಜರಾಜಯ್ಯನವರ ಬಗ್ಗೆ ಮಹಾರಾಜರಲ್ಲಿ ಕಿವಿಯೂದಿದ್ದು. ಇನ್ನೊಂದು ತನ್ನ ಭಾವಮೈದ ಸ್ಯೆಯದ್ ಮೊಕದ್ದಂ ಸಾಬಿಯನ್ನು ಬೆಳೆಸಿದ್ದು. ಅದು ಮುಂದೆ ಹೈದರಾಲಿಗೆ ಪ್ರಯೋಜನಕ್ಕೆ ಬಂತು. ಮತ್ತು ತನ್ನ ಬೆಳೆಯುತ್ತಿದ್ದ ಮಗನನ್ನು ದಂಡು-ಅರಮನೆ ಮುಂತಾದೆಡೆಗಳಿಗೆ ಕರೆದೊಯ್ಯಲು ಹೈದರ್ ಶುರು ಮಾಡಿದ್ದ. ಮಗ ಟಿಪ್ಪೂ ಸುಲ್ತಾನ ತಂದೆಯ ಎಲ್ಲಾ ಲೂಟಿಗಳನ್ನೂ ಮಹಾರಾಜರ ಮುಂದೆ ಆತ ನಡೆದುಕೊಳ್ಳುತ್ತಿದ್ದ ನಕಲಿ ವಿನಮ್ರತೆಗಳನ್ನೂ ನೋಡುತ್ತಲೇ ಬೆಳೆದ. ಇದರ ಜೊತೆಗೆ ಅರಮನೆಯಲ್ಲಿ ಕೆಲವು ನಿಗೂಢಗಳು ಸಂಭವಿಸಿದವು. ಕೆಲವು ರಾಜಪರಿವಾರದ ಸದಸ್ಯರು ನಿಗೂಢವಾಗಿ ಕಾಯಿಲೆಗೆ ಗುರಿಯಾಗಿ ಸತ್ತರು. ಕೆಲವರು ಏಕಾಏಕಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಸತ್ತರು. ೧೭೭೦ನೇ ಇಸವಿಯಲ್ಲೊಮ್ಮೆ ರಂಗನಾಥ ದೇವರ ರಥದ ಮೇಲಿರುವ ಕಸ್ತೂರಿ ರಂಗವೆಂಬ ಉತ್ಸವ ಮೂರ್ತಿಗೆ ಇದ್ದಕ್ಕಿದ್ದಂತೆ ಬೆಂಕಿ ಬಿತ್ತು.  ಅದಾದ ಕೆಲವು ದಿನಗಳಲ್ಲೇ ಮದ್ದಿನ ಮನೆಗೆ ಬೆಂಕಿ ಬಿದ್ದು ಅದು ಹರಡಿ ರಂಗನಾಥ ಸ್ವಾಮಿಯ ಗುಡಿಯ ಮುಚ್ಚಳದ ಕಲ್ಲು ಬಿದ್ದುಹೋಯಿತು. ೧೯೮೨ರಲ್ಲಿ ಹೈದರ್ ಆರ್ಕಾಟಿನ ದರೋಡೆಯನ್ನು ಇನ್ನೂ ಪೂರ್ತಿಗೊಳಿಸುತ್ತಿದ್ದಾಗಲೇ ಯಾವುದೋ ಖಾಹಿಲೆ ಬಿದ್ದು ಮಲಗಿದ. ಮತ್ತೆ ಆತ ಏಳಲಿಲ್ಲ. ಅಷ್ಟರ ಹೊತ್ತಿಗೆ ಮಗ ಟಿಪ್ಪು ತರುಣನಾಗಿದ್ದ. ಅಪ್ಪನ ಎಲ್ಲಾ ಗುಣಗಳನ್ನೂ ನೋಡುತ್ತಾ ಟಿಪ್ಪು ಬೆಳೆದಿದ್ದ. ಅಂದರೆ ದರೋಡೆ, ಕೊಲೆ, ಹುನ್ನಾರ, ಕಟಿಲ ನೀತಿ, ದ್ವೇಷ, ಮತಾಂಧತೆ ಎಲ್ಲವೂ ಅವನಿಗೆ ಸಿದ್ಧಿಸಿತ್ತು.
ರಾಜನೊಬ್ಬನ ಮಗ ರಾಜನೇ ಆಗಬೇಕಿರಲಿಲ್ಲ. ಆದರೆ ಇಲ್ಲಿ ದರೋಡೆಕೋರನ ಮಗ ಅಪ್ಪನನ್ನೇ ಮೀರಿಸುವ ದರೋಡೆಕೋರನೂ ಕುಟಿಲನೀತಿ ತಜ್ಞನೂ ಆದ. Hyder-Ali

ಆದಿಲ್‌ಷಾಹೀ, ಕುತುಬ್‌ಷಾಹೀ ಇತ್ಯಾದಿಗಳಿವೆ ಪುರೋಹಿತಷಾಹೀ ಎಲ್ಲಿದೆ?

Imageಭಾರತದ ಇತಿಹಾಸದಲ್ಲಿ ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಹಿಂದೂಗಳು ಸಲ್ಲಿಸಿರುವ ಸೇವೆ ಮಹತ್ತ್ವ್ವಪೂರ್ಣದ್ದಾಗಿದೆ. ಒಂದು ವರ್ಗದ ಚಿಂತನಕಾರರು, ಪ್ರಾಚೀನ ಭಾರತದ ಶ್ರೇಷ್ಠ ಕೊಡುಗೆಯಾದ ವರ್ಣಾಶ್ರಮ ಧರ್ಮವನ್ನು ಆಧುನಿಕ ದೃಷ್ಟಿಕೋನದಿಂದ ವಿಮರ್ಶಿಸಿ ಅಪಾರ್ಥ ಕಲ್ಪಿಸಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರಾಚೀನ ಸಂಸ್ಕೃತಿಯ ತುಚ್ಛೀಕರಣ ಮಾಡುವವರಾಗಿದ್ದಾರೆ. ಅವರ ವಾದದ ಮೂಲ “ಪುರೋಹಿತಷಾಹೀ” ಎಂಬ ಕಾಲ್ಪನಿಕ, ವಸ್ತುಸ್ಥಿತಿಯಲ್ಲದ ಚಿಂತನೆಯ ಮೇಲಿದೆ. ಭಾರತದ ಇತಿಹಾಸದಲ್ಲಿ ಯಾವುದೇ ಕಾಲದಲ್ಲಿ “ಪುರೋಹಿತಷಾಹೀ” ಸಂಸ್ಕೃತಿ ಅಥವಾ ಸಿದ್ಧಾಂತ ಇರಲಿಲ್ಲ. ದಕ್ಷಿಣ ಭಾರತದಲ್ಲಿ ೧೫,೧೬ನೇ ಶತಮಾನದಲ್ಲಿ “ನೈಜಾಮ್‌ಷಾಹೀ”, “ಇಮದ್‌ಷಾಹೀ”, “ಆದಿಲ್‌ಷಾಹೀ”, “ಕುತುಬ್‌ಷಾಹೀ”….ಹೀಗೆ ಕರೆಯಲ್ಪಟ್ಟ ಸುಲ್ತಾನರ ಆಡಳಿತವಿತ್ತು. ಇಲ್ಲಿ “ಷಾಹೀ” ಶಬ್ದ ಪ್ರಯೋಗ ಅರ್ಥಪೂರ್ಣವಾಗಿದೆ. ಆದರೆ “ಪುರೋಹಿತಷಾಹೀ” ಎಂಬುದು ಯಾವುದನ್ನೂ ಸೂಚಿಸಲಾಗದು. ಪುರೋಹಿತರ ಆಡಳಿತ (Priest kings) ಎಂದೂ ಇರಲಿಲ್ಲ. ಹಾಗೆಯೇ ಪುರೋಹಿತರದೇ ಎಂದು ಹೇಳಲಾದ ಭಾರತೀಯ ಸಂಸ್ಕೃತಿಯ ಹೊರತಾದ ಸಂಸ್ಕೃತಿಯೂ ಇರಲಿಲ್ಲ. “ಪುರೋಹಿತರು ಇತರರ ಮೇಲೆ ಸವಾರಿ ಮಾಡಿದರು”-ಇದು ಇನ್ನೊಂದು ಅರ್ಥಹೀನ ಆರೋಪ. ಪುರೋಹಿತರಿಗೆ ಆಡಳಿತ ಅಧಿಕಾರವೇ ಇಲ್ಲದಿರುವಾಗ “ಇತರರ ಮೇಲೆ ಸವಾರಿ ಮಾಡುವ” ಪ್ರಶ್ನೆಯೇ ಇಲ್ಲ. ಆದರೂ ಕೆಲವು ಇತಿಹಾಸಕಾರರು ಪುರೋಹಿತರು/ ಬ್ರಾಹ್ಮಣರು ಮಾಡಿರುವ ಎಂದು ಹೇಳಲಾದ ಶೋಷಣೆಯ ಬಗ್ಗೆ ಬರೆದವರಿದ್ದಾರೆ. ಸುಭಾಷ್ ಕಾಕ್ ಎಂಬ ವಿದೇಶದಲ್ಲಿರುವ ಇತಿಹಾಸ ವಿದ್ವಾಂಸರು ಮೇಲೆ ಹೇಳಿರುವ ಚಿಂತನೆಯವರನ್ನು  “ನೆಹರೂ ಪಂಥ”ದ ಇತಿಹಾಸಕಾರರೆಂದು (Nehruvian Scholers) ಕರೆಯುತ್ತಾರೆ. ಇದು ದುರುದ್ದೇಶಪೂರಿತ ಬರವಣಿಗೆಯೇ ವಿನಃ ವಸ್ತುನಿಷ್ಠ ಇತಿಹಾಸವಲ್ಲ. ಕೆಲವು ಸಂದರ್ಭಗಳಲ್ಲಿ  ಬ್ರಾಹ್ಮಣರಿಂದಲೂ ಅಕ್ರಮಗಳು, ದೌರ್ಜನ್ಯಗಳು, ಶೋಷಣೆಗಳು ನಡೆದಿರಬಹುದು. ಯಾಕೆಂದರೆ ಅವರೂ ಸಮಾಜದ ಇತರ ವರ್ಗಗಳಂತೆಯೇ ಸಾಮಾನ್ಯ ಮನುಷ್ಯರು. ಅವರನ್ನು “ಭೂಮಿ ದೇವ” ಎಂದು ತಿಳಿಯಬೇಕಾಗಿಲ್ಲ.
ನಮ್ಮ ಇತಿಹಾಸದಲ್ಲಿ ಬಹುತೇಕ ರಾಜರೂ ಆಡಳಿತಗಾರರೂ ಬ್ರಾಹ್ಮಣೇತರರು. ಕ್ಷತ್ರಿಯರು, ವೈಶ್ಯರು, ಶೂದ್ರರು ಹಾಗೂ ಇನ್ನಿತರರು ರಾಜರಾಗಿರುವ ನಿದರ್ಶನಗಳೇ ಹೆಚ್ಚು. ಭಾರತದ ಸುದೀರ್ಘ ಇತಿಹಾಸದಲ್ಲಿ  ರಾಜ್ಯವಾಳಿದ ರಾಜವಂಶಗಳಲ್ಲಿ ಶುಂಗರು, ಕಣ್ವರು, ಕದಂಬರು, ಪೇಶ್ವೆಯವರು… ಹೀಗೆ ಕೆಲವೇ ಮಂದಿ ಬ್ರಾಹ್ಮಣ ವಂಶಸ್ಥರಾಗಿದ್ದಾರೆ. ಸಾವಿರಾರು ವರ್ಷಗಳ ಭಾರತದ ಇತಿಹಾಸದಲ್ಲಿ ಅದು ವಿಶೇಷವಲ್ಲ. “ಪುರೋಹಿತರು ತಮ್ಮ ಹಿತಕ್ಕಾಗಿ, ಒಳಿತಿಗಾಗಿ ಶ್ರಮಿಸಿದ್ದರು” ಎಂಬುದನ್ನು ಅಲ್ಲಗಳೆಯಲಾಗದು. ಆದರೆ ಅವರು ಬಲ ಪ್ರಯೋಗದಿಂದ ಆ ಸ್ಥಾನಕ್ಕೆ ಏರಿದವರಲ್ಲ. ಇದಕ್ಕೆ ನಮ್ಮ ಕಥೆಗಳಲ್ಲಿ ಬರುವ “ಬಡ ಬ್ರಾಹ್ಮಣ” ಎಂಬ ನಿದರ್ಶನವು ಪೂರಕವಾಗಿದೆ. ಹಿಂದೆ ಪುರೋಹಿತರಿಗೆ ಸಮಾಜವೇ ಗೌರವದ ಸ್ಥಾನ ನೀಡಿತ್ತು. ಅವರ ಯೋಗ್ಯತೆಗೆ ಮತ್ತು ಸಮಾಜಕ್ಕೆ ಅವರು ನೀಡುವ ಕೊಡುಗೆಗಳಿಗಾಗಿ ಅವರು ಗೌರವಾನ್ವಿತರಾಗಿದ್ದರು. ಕೆಲವು ಸುಲ್ತಾನರೂ ಅವರಿಗೆ “ಜಿಸಿಯಾ” ತಲೆಗಂದಾಯದಿಂದ ವಿನಾಯಿತಿ ನೀಡಿದ್ದರು. ವೇದ, ಬ್ರಾಹ್ಮಣ, ಗೃಹಸೂತ್ರ, ಧರ್ಮಸೂತ್ರ, ಸ್ಮೃತಿ…ಗಳು ವ್ಯಕ್ತಿಯ ಶ್ರೇಯಸ್ಸಿಗೆ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಸಹಕಾರಿಯಾದ ಎಲ್ಲಾ ಸಂಸ್ಕಾರಗಳ ಬಗ್ಗೆ ತಿಳಿಸುತ್ತವೆ. ಈ ಬಗ್ಗೆ ಅಧ್ಯಯನವೊಂದು ಆ ಸಂಸ್ಕಾರಗಳ ಮಹತ್ತ್ವವನ್ನೂ ಜಗತ್ತಿನ ಇತರ ಪ್ರಧಾನ ಸಂಸ್ಕೃತಿಗಳಲ್ಲೂ ಇದ್ದ ಅಂತಹದೇ  ವಿಚಾರಗಳನ್ನೂ ವಿಶ್ಲೇಷಿಸಿದೆ. ((Rajbali Pandey- “Hindu Samskaras-Socio-Religions Study of the Hindu Sacraments”- 10th Reprint -2013) ಆ ಸಂಸ್ಕಾರಗಳು  ಸಮಸ್ತ ಹಿಂದೂಗಳಿಗೆ ಸಂಬಂಧಿಸಿದ್ದಾಗಿದೆ. ಮಾತ್ರವಲ್ಲದೆ ಅವು ಕೇವಲ ಅವೈಜ್ಞಾನಿಕ ಆಚರಣೆಗಳಲ್ಲ ಮತ್ತು ಅರ್ಥಹೀನ ಪದ್ಧತಿಗಳಲ್ಲ. ಇದು ಪುರೋಹಿತ ವೃತ್ತಿಯ (Priest-Craft) ಬಳಕೆಯಿಂದ ಮಾಡುವ ಶೋಷಣೆಯಲ್ಲ. ಹಿಂದೂ ಧಾರ್ಮಿಕ ಕೇಂದ್ರಗಳು, ಮಠಗಳು ಮತ್ತು ದೇವಾಲಯಗಳು. ಮಠಗಳು ಮಠಾಧಿಪತಿಗಳ ಅಧೀನದಲ್ಲಿರುತ್ತವೆ. ಆ ಮಠಗಳಿಗೆ ಆಸ್ತಿಕರ ಹಾಗೂ ಭಕ್ತ ವೃಂದದ ಮೇಲೆ ಯಾವುದೇ ಅಧಿಕಾರವಿಲ್ಲ. ಅಲ್ಲಿ ಯಾವ ರೀತಿಯಲ್ಲಿಯೂ ಒಬ್ಬ ವ್ಯಕ್ತಿಯನ್ನು ಬಲವಂತ (Campel) ಮಾಡುವ ಹಾಗಿಲ್ಲ. ಹಿಂದೂ ದೇವಾಲಯಗಳೂ ಯಾವುದೇ ವ್ಯಕ್ತಿಯನ್ನು ಯಾವುದೇ ದೃಷ್ಟಿಯಿಂದಲೂ ಕಡ್ಡಾಯ ಮಾಡುವಹಾಗಿಲ್ಲ. ವ್ಯಕ್ತಿಗಳು ದೇವಾಲಯಕ್ಕೆ ಅಥವಾ ಮಠಗಳಿಗೆ ಹೋಗಬಹುದು. ಅಥವಾ ಹೋಗದಿರಬಹುದು. ಇಲ್ಲಿ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವಿದೆ. ಇಂತಹ ದಿವಸವೇ (ವಾರವೇ) ದೇವಾಲಯಕ್ಕೆ ಹೋಗಬೇಕು ಅಥವಾ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು, ಇಂತಿಷ್ಟು ದೇಣಿಗೆ ಕೊಡಲೇಬೇಕು. ಇತ್ಯಾದಿ ಯಾವುದೇ ನಿಯಮಗಳು, ನಿಬಂಧನೆಗಳು ಹಿಂದೂ ಧರ್ಮದಲ್ಲಿ ಇಲ್ಲ. ಮತ್ತೂ ವಿಶೇಷವೇನೆಂದರೆ ಇಲ್ಲಿ ಮತಾಂಧತೆಯಿಲ್ಲ. ಪ್ರಾಯಶಃ ಜಗತ್ತಿನ ಯಾವುದೇ ಮತ-ಧರ್ಮವೂ ಈ ತೆರನಾದ ಸ್ವಾತಂತ್ರ್ಯ ಜನರಿಗೆ ನೀಡಲಾರದು. ಹಿಂದೂ ಧರ್ಮಗ್ರಂಥಗಳ ಪ್ರಕಾರ ವ್ಯಕ್ತಿಯ ಜನನಕ್ಕಿಂತಲೂ ವೊದಲು-ಮರಣದ ಅನಂತರವೂ ಮಾಡಬೇಕಾದ ೪೦ ಯಾ ೪೮ ಸಂಸ್ಕಾರಗಳಿವೆ. ಬಹುತೇಕ ಮಂದಿ ಆ ಸಂಸ್ಕಾರಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಆಚರಿಸುತ್ತಾರೆ. ಯಾವುದೇ ಸಂಸ್ಕಾರವನ್ನೂ ಮಾಡದೆಯೂ ಹಿಂದೂವಾಗಿಯೇ ಇರಬಹುದು. ಇಲ್ಲಿಯೂ ಸಂಪೂರ್ಣ ಸ್ವಾತಂತ್ರ್ಯವಿದೆ. ದೇವರಿಗೆ ಎಲೆಯನ್ನಾಗಲಿ, ಹೂವನ್ನಾಗಲಿ, ಹಣ್ಣನ್ನಾಗಲಿ, ನೀರನ್ನಾಗಲಿ ನೀಡಬಹುದೆಂದು ಭಗವದ್ಗೀತೆ ಸಾರುವುದಾದರೂ ಏನನ್ನೂ ನೀಡದೆ ಕೇವಲ “ಮಾನಸಪೂಜೆ”ಯನ್ನು ಮಾಡಬಹುದಾಗಿದೆ. “ಸರ್ವಧರ್ಮಗಳನ್ನೂ ಪರಿತ್ಯಜಿಸಿ ನನ್ನನ್ನೇ ಶರಣು ಹೊಂದು-ನಿನ್ನನ್ನು ಎಲ್ಲಾ ಪಾಪಗಳಿಂದಲೂ ಮುಕ್ತಿಗೊಳಿಸುವೆನು” ಎಂಬ ಗೀತಾಚಾರ್ಯನ ಅಭಯಕ್ಕಿಂತ ಹೆಚ್ಚು ಇನ್ನೇನು ಬೇಕು? ಎಲ್ಲಿದೆ ಈ ರೀತಿಯ ಮುಕ್ತ ಸ್ವಾತಂತ್ರ್ಯ? ಹಿಂದೂ ದೇವತೆಗಳನ್ನು ಸಾಹಿತ್ಯ-ಕಲೆಗಳಲ್ಲಿ ಕೆಟ್ಟದಾಗಿ ಚಿತ್ರಿಸಿದರೂ ಹಿಂದೂ ಭಾವನೆಗಳಿಗೆ ಘಾಸಿ ಮಾಡಿದರೂ ಏನೂ ಹೆದರಬೇಕಾಗಿಲ್ಲ. ನಿರ್ಭಯವಾಗಿ ಸಂಚರಿಸಬಹುದು- ಇಲ್ಲಿದೆ ಅವರಿಗೆ ಸ್ವಾತಂತ್ರ್ಯ. “ಪುರೋಹಿತಷಾಹೀ” ಎಂಬುದು ಭಾರತದ ಇತಿಹಾಸದ ಯಾವುದೇ ಕಾಲದಲ್ಲಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಅದನ್ನು ಸೃಷ್ಟಿಸಿ, ಪೋಷಿಸಿ, ಯಥೇಚ್ಛವಾಗಿ ಬಳಸುವ ಸ್ವಾತಂತ್ರ್ಯ ಹಿಂದೂ ಧರ್ಮವೇ ನೀಡಿದೆ. ಅವಹೇಳನಕ್ಕೆ ಅತೀ ಸುರಕ್ಷಿತ ತಾಣ ಹಿಂದೂ ಧರ್ಮ.
ಆದಿಲ್‌ಷಾಹೀ, ಕುತುಬ್‌ಷಾಹೀ ಇತ್ಯಾದಿಗಳಿವೆ ಪುರೋಹಿತಷಾಹೀ ಎಲ್ಲಿದೆ?
(ಸಿ.ಎಸ್.ಶಾಸ್ತ್ರೀ, ನಿವ್ರತ್ತ ಪ್ರಾಧ್ಯಾಪಕರು, ಮಂಗಳೂರು)

ಪ್ರಶ್ನೆ ಕೇಳಿದ್ದಕ್ಕೆ ನಾವು ಆರೆಸ್ಸೆಸ್ ಆದೆವು

ಚೇತನ್ ಚಿಕ್ಕನಾಯಕನಹಳ್ಳಿ,

“ನಾನಂತೂ  ಮನುಸ್ಮೃತಿಯನ್ನು ಓದಿಲ್ಲ. ಯಾರೋ ನನಗೆ ಹೇಳಿದ್ದು : ವೇದಗಳನ್ನು ಓದುವ ದಲಿತರ ಕಿವಿಗೆ ಸೀಸವನ್ನು  ಕಾಯಿಸಿ ಹುಯ್ಯಬೇಕು ಎಂದು. ಹೀಗೆ ಸಾರುವ  ಮನುಸ್ಮೃತಿಯನ್ನು ನಮ್ಮ ಸಂವಿಧಾನವನ್ನಾಗಿ ಸ್ವೀಕರಿಸಬಹುದಿತ್ತು, ಪ್ರತ್ಯೇಕ ಸಂವಿಧಾನದ ಆವಶ್ಯಕತೆಯಾದರು ಯಾಕೆ ಬೇಕಿತ್ತು? ಎಂದು ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಮುರ್ತಿಗಳೂ ಹಾಗೂ ಒಂದು ರಾಜ್ಯದ ರಾಜ್ಯಪಾಲರು  ಆದ ವ್ಯಕ್ತಿಯೊಬ್ಬರು ಹೇಳುತ್ತಾರೆ.”
“ಟಿಪ್ಪು ಸುಲ್ತಾನನ ಬಗ್ಗೆ ಇರುವ ಒಂದು ಸಾಮಾನ್ಯ ಆರೋಪವೆಂದರೆ ಆತ ಮತಾಂತರ ಮಾಡಿದನೆಂದು. ನಾನೇನು ಅವನು ಮತಾಂತರ ಮಾಡಿಯೇ ಇಲ್ಲವೆಂದು ಹೇಳುತ್ತಿಲ್ಲ. ಮಾಡಿದ್ದಾನೆ. ಆದರೆ ಆತ ಮಾಡಿದ್ದು ಇಸ್ಲಾಂ ಧರ್ಮವನ್ನು ಬೆಳೆಸುವುದಕ್ಕಾಗಿ ಅಲ್ಲ. ಬದಲಾಗಿ ತನ್ನ ವಿರೋಧಿಗಳನ್ನು ಶಿಕ್ಷಿಸುವುದಕ್ಕೆ”
“…ಹಾಗೆಯೇ ನೀವು ಸ್ವಲ್ಪ ಯೋಚಿಸಿ, ಕರ್ನಾಟಕದಲ್ಲಿ ಸಾಮಾನ್ಯವಾಗಿ ನಾಟಕದ ಕಥಾವಸ್ತು ಬಸವಣ್ಣನವರು, ಆನಂತರ ಟಿಪ್ಪು ಸುಲ್ತಾನ್, ಆಮೇಲೆ ರಾಣಿ ಚೆನ್ನಮ್ಮ, ಇತ್ಯಾದಿ, ಇತ್ಯಾದಿ…”
ಈ ಮೇಲಿನ ಆಣಿಮುತ್ತುಗಳು ಉದುರಿದ್ದು ಯಾರ ಬಾಯಿಂದ ಎಂದುಕೊಂಡಿರಿ? ರಾವ್ ಬಹದ್ದೂರ್ ಧರ್ಮಪ್ರವರ್ಥ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯವರು ಕೊ. ಚೆನ್ನಬಸಪ್ಪನವರ “ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್” ಎಂಬ ಪುಸ್ತಕ ಲೋಕಾರ್ಪಣ  ಕಾರ್ಯಕ್ರಮವನ್ನು ದಿನಾಂಕ ೧೦/೧೨/೨೦೧೩ರಂದು ಬೆಲ್ ಹೋಟೆಲ್‌ನಲ್ಲಿ ಏರ್ಪಡಿಸಿದ ಸಂದರ್ಭದಲ್ಲಿ. ಮಹಾನ್ ಬುದ್ದಿಜೀವಿ, ಸೆಕ್ಯುಲರ್ ಶಿರೋಮಣಿಗಳೂ ಆದ ಮರುಳಸಿದ್ದಪ್ಪನವರು ತಥಾಕಥಿತ ಸೆಕ್ಯುಲರ್ ಸಿದ್ಧಾಂತವನ್ನು ಮಂಡಿಸಿದ್ದು ಹೀಗೆ.
ನಾವು : ಸರ್, ತಾವು ಮನುಸ್ಮೃತಿಯನ್ನು ಓದಿಲ್ಲ ಎಂದು ಹೇಳಿದಿರಿ. ಆದರೂ ಅದರ ಬಗ್ಗೆ ಮತನಾಡುವುದಕ್ಕೆ ನಿಮಗೆ ನೈತಿಕ ಹಕ್ಕಿದೆಯೆ?
ಮರುಳಸಿದ್ದಪನವರು : ಯಾರೋ ಹೇಳಿದ್ದನ್ನು ನಾನಿಲ್ಲಿ quote ಮಾಡಿದ್ದೇನೆ ಅಷ್ಟೇ. ನಿಮಗೆ ಯಾರೋ ತಲೆ ಕೆಡಿಸಿರಬೇಕು. ಅದಕ್ಕೆ ಹೀಗೆಲ್ಲ ಪ್ರಶ್ನೆ ಕೇಳುತ್ತಿದ್ದೀರಿ.
ನಾವು : ಸರ್, ತಾವು  ಹೆಚ್ಚು ನಾಟಕಕಾರರ ಸಾಮಾನ್ಯ ವಿಷಯ ಬಸವಣ್ಣ ಬಿಟ್ಟರೆ ಟಿಪ್ಪು ಎಂದು ಹೇಳಿದಿರಿ. ಅದೇ ತೆರನಾಗಿ ಮಾತನಾಡುವುದಾದರೆ ಅತಿ ಹೆಚ್ಚು ಜನಪ್ರಿಯತೆ ಪಡೆದ ಡಾ . ಎಸ್ . ಎಲ್ . ಭೈರಪ್ಪನವರನ್ನು ತಾವು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿರಾ? ನರೇಂದ್ರ ಮೋದಿಯವರ ಜನಪ್ರಿಯತೆ ಕಂಡು ತಾವು ಅವರನ್ನು ಒಪ್ಪುತ್ತೀರಾ?
ಮರುಳಸಿದ್ದಪನವರು : ನಿಮಗೆ RSS ನವರು   brain wash ಮಾಡಿದ್ದಾರೆ ಅನಿಸುತ್ತೆ. ಅದಕ್ಕೆ ಹೀಗೆಲ್ಲ ಮಾತಾಡ್ತಾ ಇದೀರಿ.
ನಾವು : ಸರ್, ತಾವು ಹೇಳಿದಿರಿ “ಟಿಪ್ಪು ಸುಲ್ತಾನ್ ಧರ್ಮಕಾರಣಕ್ಕಾಗಿ ಮತಾಂತರ ಮಾಡಲಿಲ್ಲ. ಆತ ತನ್ನ ವಿರೋಧಿಗಳನ್ನ ಶಿಕ್ಷಿಸಲಿಕ್ಕೆ ಮತಾಂತರ ಮಾಡಿದ” ಎಂದು. ಅಂದರೆ ಕೊಲೆ ಮಾಡುವವನಿಗೂ ಒಂದು ಕಾರಣ ಅಂತ ಇರತ್ತೆ. ಕಾರಣ ಕೊಟ್ಟ ತಕ್ಷಣ ನಾವು ಸುಮ್ಮನಿದ್ದುಬಿಡಬೇಕೆ?
ಮರುಳಸಿದ್ದಪನವರು : ನೀವು ಟಿಪ್ಪು ಬಗ್ಗೆ ಓದಿಕೊಂಡಿದಿರೇನ್ರಿ? ವೊದಲು ಅದನ್ನು ಮಾಡಿ. ನಂಗೆ ಗೊತ್ತು ನೀವು ಪಕ್ಕ್ಕಾ RSSನವರು ಅಂತ. ನೀವೆಲ್ಲ   closed minded. I don’t want to talk with you people.
ಇದು ನಡೆದದ್ದು ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದ ಮರುಳಸಿದ್ದಪ್ಪನವರನ್ನು ವಿದ್ಯಾರ್ಥಿಗಳಾದ ನಾವೆಲ್ಲರೂ ನಮ್ಮ ಸಂಶಯ ನಿವಾರಣೆಗಾಗಿ ಹಾಗು ಸತ್ಯವನ್ನು ತಿಳಿಯಲಿಕ್ಕೆ ಪ್ರಶ್ನಿಸಿದಾಗ ನಡೆದ ಆನಂತರದ ಘಟನೆ. ಅಷ್ಟೇ ಅಲ್ಲ ನಾವು ಇನ್ನೂ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರೂ   I don’t want to talk with you peopleಎಂದವರೇ ಸರಕದ್ದ ಕಳ್ಳನ ತೆರದಿ ಸರ ಸರ ಹೆಜ್ಜೆ ಹಾಕುತ್ತಾ ತಮ್ಮ ಕಾರನ್ನು ಹತ್ತಿ ಕೂತು ಡ್ರೈವರ್‌ಗೆ ಹೊರಡುವಂತೆ ಸೂಚಿಸಿದರು. ಕಾರು ಹೊರಟು ಹೋಯಿತು. ಆದರೆ ಪ್ರಶ್ನೆಗಳು ಮಾತ್ರ ನಮ್ಮಲ್ಲಿ ಹಾಗೇ ಉಳಿದವು.
ಇದೇ ಮರುಳಸಿದ್ದಪ್ಪನವರು ಮೊನ್ನೆ ಮೊನ್ನೆ  ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಬಿಟ್ಟರೆ ಇನ್ನುಳಿದ ಬಹುತೇಕ ಕನ್ನಡ ದಿನಪತ್ರಿಕೆಗಳು ಭಯೋತ್ಪಾದಕರ ಬಂದೂಕಿನ ಗುಂಡಿಗಿಂತಲೂ ಅತಿಯಾದ ಭಯೋತ್ಪಾದನೆಯನ್ನು ಮಾಡುತ್ತಿವೆ ಎಂಬರ್ಥದ ಮಾತುಗಳನ್ನಾಡಿದರು. ಹೇಗಿದೆ ನೋಡಿ   ಸ್ವಾಮಿ? ತಾವು ಏನೇ ಹೇಳಿದರೂ  ಅದನ್ನು ಕೇಳಿ ಸುಮ್ಮನಿರಬೇಕು. ಒಂದು ವೇಳೆ ಪ್ರಶ್ನಿಸಿದರೆ ಅಂತವರು ದೇಶದ್ರೋಹಿಗಳು, ಭಯೋತ್ಪಾದಕರು ಇಲ್ಲ ಖಖನವರು ಆಗಿಬಿಡುತ್ತಾರೆ. ಸ್ವಾಮಿ ಮರುಳಸಿದ್ದಪ್ಪನವರೆ ತಮ್ಮ ಮರಳು ಮಾತಿನ ಮೋಡಿಗೆ ನಾವು ಒಳಗಾಗಿದ್ದೆವೆಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನವಷ್ಟೇ. “ಪ್ರಶ್ನೆ ಮಾಡಿಯೇ ಒಪ್ಪಿಕೊ” ಎಂದು ದಾರ್ಶನಿಕ ಸಾಕ್ರೆಟಿಸ್ ಹೇಳಿದ್ದಾರೆ. ಹೌದು, ಪ್ರಶ್ನಿಸುವುದರಲ್ಲೇನಿದೆ ತಪ್ಪು? ನಿಮ್ಮ ಬಳಿ  ಉತ್ತರ  ಇದ್ದರೆ ಹೇಳಿ, ಇಲ್ಲ ಅಂದರೆ   ನನ್ನ ಬಳಿ  ಉತ್ತರ ಇಲ್ಲ   ಎಂದಾದರೂ  ಹೇಳಿ.  ಅದನ್ನು ಬಿಟ್ಟು  ನೀವು ಖಖಎಂದು ಬ್ರಾಂಡ್ ಮಾಡಿಬಿಡೋದು ಎಷ್ಟು ಸರಿ? ಅಥವಾ ಹಾಗೆ ಮಾಡುವ ಉದ್ದೇಶವಾದರೂ ಏನು? ಅಥವಾ ಪ್ರಶ್ನೆಯೇ ಮಾಡದಿರುವುದಕ್ಕೆ ನೀವೇನು ಪ್ರಶ್ನಾತೀತರೆ?
ನಾವು ಸಮಾನತೆಯ ಪರವಾಗಿ ಎಂದು ಹೇಳುವ ನೀವು ಹಾಗೂ  ನಿಮ್ಮಂತವರು ನಮ್ಮ ಸಂವಿಧಾನದ ೩೭೦ನೇ  ವಿಧಿಯು ಭಾರತ ದೇಶದಲ್ಲೇ ಮರಿ ದೇಶವನ್ನು ಜಮ್ಮು ಮತ್ತು ಕಾಶ್ಮೀರ ಎಂಬ ಹೆಸರಿನಲ್ಲಿ ಹುಟ್ಟುಹಾಕಿದೆಯಲ್ಲ ಅದನ್ನ ಎಂದಾದರು ಪ್ರಶ್ನಿಸಿ ಪ್ರತಿಭಟಿಸಿದ್ದಿರಾ? ಒಂದು ದೇಶದಲ್ಲಿ ಎಲ್ಲ ಸಮಾನವಾಗಿರಬೇಕೆಂದು ಹೇಳುವ ನೀವು ಇದನ್ಯಾಕೆ ಮಾಡುತ್ತಿಲ್ಲ? ನೀವು ಇಂತದ್ದನ್ನೆಲ್ಲ ಮಾಡುವುದಿಲ್ಲ ಬಿಡಿ. ನೀವು ಮಾಡುವುದೇನು ಅಂದರೆ ಬೆಂಗಳೂರು ವಿ.ವಿಯ ಕ್ಯಾಂಪಸ್ಸಿನಲ್ಲಿರುವ ಮುನೇಶ್ವರ ದೇವಾಲಯವನ್ನು ಕೆಡವಿಹಾಕಬೇಕು ಎಂಬರ್ಥದ ಹೇಳಿಕೆ ಕೊಡೋದು. ಸ್ವಾಮಿ ಮರುಳಸಿದ್ದಪ್ಪನವರೆ ನಿಮಗೆ ತಿಳಿದಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ ಒಂದಂತೂ  ಸತ್ಯ : ಅಲ್ಲಿರುವ ದೇವಾಲಯಕ್ಕೆ ಇಂತಿಂತವರೆ ಬರಬೇಕೆಂದು ಯಾರು ಬೋರ್ಡ್ ನೇತು  ಹಾಕಿಲ್ಲ ಅಥವಾ ಹಾಗಂತ ಯಾರೂ ಕೂಡ ಹೇಳಿಲ್ಲ. ಅಷ್ಟೇ ಅಲ್ಲ ಬೆಂಗಳೂರು ವಿ.ವಿ ಯಲ್ಲಿ ಪ್ರತಿ ವರ್ಷವೂ ಮುನೇಶ್ವರ ದೇವರ ಹೆಸರಿನಲ್ಲಿ  ಅನ್ನ ದಾಸೋಹ ನಡೆಯುತ್ತದೆ. ಬೆಂಗಳೂರು ವಿ.ವಿಯ ಪ್ರಸಾದ ಸ್ವೀಕರಿಸಲು ಇಷ್ಟ ಇರುವ ಬೋಧಕೇತರ ವರ್ಗದವರು ಬಂದು ಪ್ರಸಾದ ಸ್ವೀಕರಿಸುತ್ತಾರೆ. ಬೇಕಾದರೆ ತಾವೂ ಕೂಡ ಬನ್ನಿ. ಭಾಗವಹಿಸಿ, ಪ್ರಸಾದ ಸ್ವೀಕರಿಸಿ, ನಮ್ಮಲ್ಲಿ ನೀವೂ  ಕೂಡ ಒಬ್ಬರಾಗಿ. ಅದನ್ನು ಬಿಟ್ಟು ಇಂತಹ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಹೇಳಿಕೆಯನ್ನೇಕೆ ನೀಡುತ್ತೀರಿ? ನಿಮ್ಮನ್ನೂ ನಿಮ್ಮ ಮಾತುಗಳನ್ನೂ ನನಗೆ ಯಾವಾಗ ನೆನಪಿಸಿಕೊಂಡರೂ ಈ ಭಾವಗೀತೆಯ ಸಾಲುಗಳು ನೆನಪಾಗುತ್ತವೆ.
ನಿಂತ ನೀರ ಕಲಕಬೆಡಿ ಕಲ್ಲುಗಳೇ,
ಹೂ ದಳಗಳ ಇರಿಯಬೇಡಿ ಮುಳ್ಳುಗಳೇ,
ಏನಿದೆಯೋ ನೋವು ಅವಕೆ ತಮ್ಮದೇನೆ,
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೆ
 ಸಮಾಜದ ಸ್ವಾಸ್ಥ್ಯ ಕೆಡಿಸುವ ನಿಮ್ಮನ್ನು ಪ್ರಶ್ನಿಸಿ ಉತ್ತರ ನಿರೀಕ್ಷಿಸುವುದು ತಪ್ಪೇ? ನಾನಂತೂ ಅದನ್ನು ತಪ್ಪು ಎಂದು ತಿಳಿದಿಲ್ಲ. ತಪ್ಪು ಎಂದು ತಿಳಿದರೂ ಕೂಡ ತಪ್ಪನ್ನೇ ಮಾಡುವುದಕ್ಕೆ ನಾನೇನು ನೀವಲ್ಲ ಬಿಡಿ. ಯಾಕೆ ಅಂತ ಕೇಳ್ತೀರಾ? ಇಲ್ಲಿದೆ ನೋಡಿ ನಿಮ್ಮದೇ ಒಂದು ತಾಜಾ ಉದಾಹರಣೆ: ಮನುಸ್ಮೃತಿಯನ್ನು ಓದಿಕೊಂಡಿರದ ನೀವು ಮನುಸ್ಮೃತಿಯ ಬಗ್ಗೆ ಮಾತನಾಡಬಹುದು (ಆ ಸಂಧರ್ಭದಲ್ಲಿ ಇಬ್ಬರು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಒಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕ ತರು  ಉಪಸ್ಥಿತರಿದ್ದರು). ಆದರೆ ನಾವು ಟಿಪ್ಪುವಿನ ಮತಾಂತರದ ಕಾರ್ಯವೈಖರಿಯ ಬಗ್ಗೆ ಕೇಳಿದಾಕ್ಷಣ ನೀವು ನಮಗೆ  ಟಿಪ್ಪು ಬಗ್ಗೆ ಓದಿದಿರೇನ್ರಿ? ಎಂದು ಪ್ರಶ್ನೆ ಮಾಡುತ್ತೀರಿ. ಇದೆಂಥಾ ನ್ಯಾಯ ಸ್ವಾಮಿ? ನೀವು ಏನೂ ಓದದೆಯೂ ಒಂದು ಪ್ರಾಚೀನ ಗ್ರಂಥದ ಬಗ್ಗೆ ಮಾತನಾಡಬಹುದಾದರೆ ನಾವೂ ಕೂಡ ಪ್ರಶ್ನೆ ಕೇಳಬಹುದು ತಾನೇ? ನ್ಯಾಯ ಎಲ್ಲರಿಗೂ ಒಂದೇ ಇರಬೇಕಲ್ಲವೇ? ಎಷ್ಟೇ ಆಗಲಿ ತಾವು ಸಮಾನತೆಯನ್ನು ಪ್ರತಿಪಾದಿಸುವವರಲ್ಲವೇ?
ತಮಾಷೆ ಎಂದರೆ ಟಿಪ್ಪು ಬಗ್ಗೆ ಪುಸ್ತಕ ಬರೆದ ಕೋ .ಚೆ.ಯವರೇ ಸಭೆಯನ್ನು ಉದ್ದೇಶಿಸಿ ನೀವು ಟಿಪ್ಪು ಮತಾಂಧನೆಂದು ಬಿಂಬಿಸುವ ಪುಸ್ತಕವನ್ನೂ  ಹಾಗೂ ನಾನು ಬರೆದ ಪುಸ್ತಕವನ್ನೂ ಓದಿ ನೋಡಿ. ನಿಮಗೆ ಯಾವುದು ಸರಿ ಎನಿಸುವುದೋ ಅದನ್ನೇ ಸ್ವೀಕರಿಸಿ ಎಂದರು. ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆದರೆ ಈ ಸೆಕ್ಯುಲರ್ ಮಹಾಶಯರು ಮಾತ್ರ ಪ್ರಶ್ನೆ ಕೇಳಿದ್ದಕ್ಕೆ, ಖಖಎಂದು ಬ್ರಾಂಡ್ ಮಾಡಿಬಿಟ್ಟರು. ಸ್ವಾಮಿ ಪ್ರಶ್ನೆ ಕೇಳಲ್ಕುಖಖ ಆದರೇನು? ಈಖಖ ಆದರೇನು? ಪ್ರಜಾಪ್ರಭುತ್ವದಲ್ಲಿ ನ್ಯಾಯದ ಎದುರು ಎಲ್ಲರೂ ಸಮಾನರೆ.  ಪ್ರಶ್ನಿಸುವ ಹಕ್ಕು ಹಾಗೂ ಪ್ರಶ್ನೆಗೆ ಉತ್ತರ ಕೊಡಿ ಎಂದು ಕೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದು ಖಖ ಆಗಿರಬಹುದು ಅಥವಾ ತೋಟದಪ್ಪ ವಿಧ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾಗಿರಬಹುದು. ಯಾಕೆ? ಖಖನವರು ಕೇಳುವ ಪ್ರಶ್ನೆಗೆ ಉತ್ತರಿಸುವ ಎದೆಗಾರಿಕೆ ನಿಮ್ಮಲ್ಲಿ ಇಲ್ಲವೇ? ನೀವೇನು ಅಳ್ಳೆದೆಯವರೇ? ಪ್ರಶ್ನೆ ಕೇಳಿದ ತಕ್ಷಣ ಪಲಾಯನ ಮಾಡಿದಿರಲ್ಲಾ, ನೀವೂ ಒಬ್ಬ ಸಮಾನತೆಯನ್ನು ಪ್ರತಿಪಾದಿಸುವ ವ್ಯಕ್ತಿಯೇ? ಪ್ರಶ್ನೆ ಕೇಳಿದ ತಕ್ಷಣವೇ ಕಾಲಿಗೆ ಬುದ್ದಿ ಹೇಳುವ ನಿಮ್ಮಂತ ಬುದ್ದಿಜೀವಿಗಳಿಗೆ ಸಮಾಜದ ನೈಜ ಕಾಳಜಿ ಉಳ್ಳ ಜನರಿಂದ ಧಿಕ್ಕಾರವಿರಲಿ.

(ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ)
                                                                                       

ನಥೇನಿಯಲ್ ಬಟ್ಲರ್ ನೋ, ನಾರದನೋ?

ಸಚ್ಚಿದಾನಂದ ಹೆಗಡೆ, ಭತ್ತಗುತ್ತಿಗೆ

Image

ಆಧುನಿಕ ಪತ್ರಿಕೋದ್ಯಮವು ಪಾಶ್ಚಾತ್ಯ ಜಗತ್ತಿನ ಕೊಡುಗೆಯಾದರೂ ಅದರ ಮೂಲತತ್ತ್ವ್ವ ಹುಟ್ಟಿದ್ದು ಮತ್ತು ಅರಳಿದ್ದು ಭಾರತೀಯ ಸಂಸ್ಕೃತಿಯಲ್ಲಿ. ಅಂದು ಇಂದಿನ ಹಾಗೆ ಮುದ್ರಿತ ಪತ್ರಿಕೆಗಳು ಇಲ್ಲದಿದ್ದರೂ ಇಂದಿನ ಪತ್ರಿಕೆಗಳ ಕಾರ್ಯ ಅಂದು ಬಾಯಿಮಾತಿನಲ್ಲಿ ನಡೆದಿತ್ತು. ಮೂರು ಲೋಕಗಳಿಗೂ ವರದಿ ಮಾಡುತ್ತಿದ್ದ ನಾರದ ಮಹರ್ಷಿ ಹಾಗೂ ಕುರುಕ್ಷೇತ್ರ ಯುದ್ಧಭೂಮಿಯ ವರದಿ ಮಾಡಿದ ಸಂಜಯ ನಮ್ಮ ಪ್ರಾಚೀನ ವರದಿಗಾರಿಕೆಗೆ ಉಜ್ಜ್ವ್ವಲ ಉದಾಹರಣೆಗಳು. ನಾರದ ಮಹರ್ಷಿ ಜಗತ್ತಿನ ಮೊಟ್ಟವೊದಲ ವರದಿಗಾರ. ಕನ್ನಡ ಪತ್ರಿಕೋದ್ಯಮಕ್ಕೆ ವೈಚಾರಿಕ ಅಡಿಪಾಯ ಹಾಕಿದ ಮತ್ತು ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾದ “ಮಂಕುತಿಮ್ಮನ ಕಗ್ಗ” ವನ್ನು ರಚಿಸಿದ ದಾರ್ಶನಿಕ ಕವಿ ಡಾ. ಡಿ.ವಿ. ಗುಂಡಪ್ಪ ಅವರು ಹಾಗೆಂದು ಘೋಷಿಸಿದ್ದಾರೆ.
ನಾರದ ಮಹರ್ಷಿಯಿಂದ ಆರಂಭಿಸಿ ಇಂದಿನವರೆಗೆ ಭಾರತೀಯ ಪತ್ರಿಕೋದ್ಯಮ ನಡೆದುಬಂದ ದಾರಿ ಮತ್ತು ಅದರ ಸೈದ್ಧಾಂತಿಕ ಇತಿಹಾಸವನ್ನು ಪಾಶ್ಚಾತ್ಯ ಪತ್ರಿಕೋದ್ಯಮದ ಇತಿಹಾಸದ ಜೊತೆಗೆ ತುಲನಾತ್ಮಕವಾಗಿ ನೋಡಿದರೆ ಇವೆರಡೂ ಎಂದೂ ಕೂಡದ ಭಿನ್ನ ಧಾರೆಗಳಾಗಿ ಕಾಣಿಸುತ್ತವೆ. ಡಾ. ಡಿ.ವಿ. ಗುಂಡಪ್ಪ ಅವರ ಮಾತಿನಲ್ಲಿ ಹೇಳುವುದಾದರೆ ಜಗತ್ತಿನ ಆದ್ಯ ವರದಿಗಾರ ನಾರದ ಮಹರ್ಷಿಯ ಜೀವನೋದ್ದೇಶ ಧರ್ಮ ಸ್ಥಾಪನೆ. ನಾರದ ಮಹರ್ಷಿ ಕೇವಲ ವರದಿ ಮಾಡುತ್ತಿರಲಿಲ್ಲ. ಇಂದಿನ ಪತ್ರಿಕೋದ್ಯಮದ ವೈಶಿಷ್ಟ್ಯಗಳೆಂದು ಹೇಳಬಹುದಾದ ಸುದ್ದಿವಿಶ್ಲೇಷಣೆ ಮತ್ತು ಅಗ್ರಲೇಖನ ಇವುಗಳ ಕಾರ್ಯವನ್ನೂ ತನ್ನ ಬಾಯಿಮಾತಿನಲ್ಲಿ ಮಾಡುತ್ತಿದ್ದ. ಜಗತ್ತಿನಲ್ಲಿ ಯಾವಾಗ ಯಾವಾಗ ಅಧರ್ಮದ ಹೆಚ್ಚಳವಾಗುತ್ತದೆಯೋ ಆಗೆಲ್ಲ ತಾನು ಅವತರಿಸಿ ಬರುವುದಾಗಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ರೀತಿಯಲ್ಲಿಯೇ ನಾರದ ಮಹರ್ಷಿ ಕೂಡ ಜಗತ್ತಿನಲ್ಲಿ ಅಧರ್ಮದ ಉತ್ಕರ್ಷವಾದಾಗ ಅದನ್ನು ನಿವಾರಿಸಿ ಧರ್ಮ ಸ್ಥಾಪನೆಗೋಸ್ಕರ ಸಕ್ರಿಯನಾಗುತ್ತಿದ್ದ.
ನಾರದ ಮಹರ್ಷಿಯ ಆ ಕಾಲದಿಂದ ಹಿಡಿದು ಆಧುನಿಕ ಪತ್ರಿಕೋದ್ಯಮ ಭಾರತದಲ್ಲಿ ಸ್ಥಾಪನೆಗೊಳ್ಳುವವರೆಗೆ ಬಹುದೀರ್ಘ ಕಾಲದ ಅಂತರವಿದ್ದರೂ ಆಧುನಿಕ ಭಾರತೀಯ ಪತ್ರಿಕೋದ್ಯಮ ಸಹ ನಾರದ ಮಹರ್ಷಿ ಹಾಕಿಕೊಟ್ಟ ದಾರಿಯಲ್ಲೇ ಕೆಲವು ದಶಕಗಳ ಹಿಂದಿನವರೆಗೂ ಮುಂದಡಿಯಿಟ್ಟಿತು ಎಂದರೆ ಅತಿಶಯೋಕ್ತಿ ಆಗಲಾರದು. ಅಂದರೆ ಅದು ಮೌಲ್ಯ ಸ್ಥಾಪನೆಗೋಸ್ಕರ,ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವುದಕ್ಕೋಸ್ಕರ ಮತ್ತು ಧ್ಯೇಯವಾದಿಯಾಗಿ ತನ್ನ ಅಸ್ತಿತ್ವವನ್ನು ಸಾರ್ಥಕ ಪಡಿಸುವುದಕ್ಕೋಸ್ಕರ ಅದು ಶ್ರಮಿಸಿತು. ಭಾರತದಲ್ಲಿ ಪ್ರಪ್ರಥಮ ಪತ್ರಿಕೆ ಆರಂಭಿಸಿದವನು ಜೇಮ್ಸ್ ಅಗಸ್ಟಸ್ ಹಿಕ್ಕಿ ಎಂಬ ಯುರೋಪಿಯನ್. ಆದರೆ ಭಾರತೀಯ ಪತ್ರಿಕೋದ್ಯಮದ ಪಿತಾಮಹನೆಂಬ ಹೆಸರು ಪಡೆದಾತ ರಾಜಾರಾಮ ಮೋಹನರಾಯ್. ರಾಜಾರಾಮ ಮೋಹನರಾಯ್‌ಗಿಂತ ಮೊದಲು ಗಂಗಾಧರ ಭಟ್ಟಾಚಾರ್ಯ ಎಂಬಾತ ಪತ್ರಿಕೆಯೊಂದನ್ನು ಶುರು ಮಾಡಿದ್ದನಾದರೂ ಆತ ಪ್ರಾರಂಭಿಸಿದ ಪತ್ರಿಕೆ ತೀರ ಅಲ್ಪಾಯುವಾಗಿತ್ತು ಮತ್ತು ಭಾರತೀಯ ಪತ್ರಿಕೋದ್ಯಮಕ್ಕೆ ಮಹತ್ತಾದ್ದನ್ನು ಆತ ನೀಡಿದ ಬಗ್ಗೆ ಉಲ್ಲೇಖಗಳು ಸಿಗುವುದಿಲ್ಲ. ರಾಜಾರಾಮ ಮೋಹನರಾಯ್ ಈ ವಿಷಯದಲ್ಲಿ ಇತಿಹಾಸ ನಿರ್ಮಿಸಿದನೆಂದೇ ಹೇಳಬೇಕು. ಆ ಕಾಲದಲ್ಲಿ ಯುರೋಪಿನಿಂದ ಬಂದ ಕ್ರೈಸ್ತಮತ ಪ್ರಸಾರಕರು ಮತಾಂತರಕ್ಕೆ ಸಾಧನವಾಗಿ ನಮ್ಮ ದೇಶದಲ್ಲಿ ಪತ್ರಿಕೆಗಳನ್ನು ಆರಂಭಿಸಿದರು. ಅವರು ತಮ್ಮ ಪತ್ರಿಕೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು, ಇಲ್ಲಿನ ರಾಷ್ಟ್ರೀಯತೆಯನ್ನು, ವೇದ-ಉಪನಿಷತ್ತುಗಳೇ ವೊದಲಾದ ಆಧ್ಯಾತ್ಮಿಕ ಸಾಹಿತ್ಯವನ್ನು ಹೀನವಾಗಿ ಖಂಡಿಸುತ್ತಿದ್ದರು ಮತ್ತು ಅವುಗಳ ವಿರುದ್ಧ ಮಿಥ್ಯಾರೋಪ ಮಾಡುತ್ತಿದ್ದರು. ಈ ಮಿಥ್ಯಾರೋಪಗಳನ್ನು ಸುಳ್ಳೆಂದು ಸಾಬೀತುಪಡಿಸುವ ಮತ್ತು ಸತ್ಯ ವಿಚಾರಗಳನ್ನು ತಿಳಿಸುವ ಲೇಖನ-ಪತ್ರಗಳನ್ನು ರಾಜಾರಾಮ ಮೋಹನರಾಯ್ ಆ ಪತ್ರಿಕೆಗಳಿಗೆ ಕಳುಹಿಸಲಾರಂಭಿಸಿದ. ಆದರೆ ಆ ಮತ ಪ್ರಸಾರಕರು ಅವುಗಳನ್ನು ಪ್ರಕಟಿಸಲು ನಿರಾಕರಿಸಿದರು. ಇದರಿಂದ ಮನನೊಂದ ರಾಜಾರಾಮ ಮೋಹನರಾಯ್ ತಾನೇ ಮೂರು ಪತ್ರಿಕೆಗಳನ್ನು ಶುರುಮಾಡಿದ. ಈ ಪತ್ರಿಕೆಗಳಲ್ಲಿ ಆತ ಕ್ರೈಸ್ತಮತ ಪ್ರಸಾರಕ ಪತ್ರಿಕೆಗಳು ಭಾರತೀಯ ಸಂಸ್ಕೃತಿ-ಆಧ್ಯಾತ್ಮಿಕ ಸಾಹಿತ್ಯವನ್ನು ಹೀಯಾಳಿಸುತ್ತಿರುವುದನ್ನು ಉಗ್ರವಾಗಿ ಖಂಡಿಸಿದ ಹಾಗೂ ಇಂಗ್ಲೀಷರ ಆಡಳಿತ ವ್ಯವಸ್ಥೆಯ ಮಧ್ಯದಲ್ಲಿಯೇ ನಮ್ಮ ರಾಷ್ಟ್ರೀಯತೆಯನ್ನು ಅದರ ಸರ್ವ ಘನತೆಯೊಡನೆ ಎತ್ತಿಹಿಡಿದ. ಈ ಕಾರಣಕ್ಕಾಗಿಯೇ ಆತನನ್ನು ಭಾರತೀಯ ಪತ್ರಿಕೋದ್ಯಮದ ಪಿತಾಮಹ ಎಂದು ಕರೆದದ್ದು.
ಅಲ್ಲಿಂದ ಮುಂದೆ ಮಹಾತ್ಮ ಗಾಂಧೀಜಿಯವರ ತನಕ ನೂರಾರು ಧೀಮಂತ ಪತ್ರಕರ್ತರು ನಮ್ಮ ನಾಡಿನಲ್ಲಿ ಉದಯಿಸಿದರು. ಅವರೆಲ್ಲರೂ ರಾಷ್ಟ್ರೀಯತೆಯ ಪುನರ್ ಸ್ಥಾಪನೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ತಮ್ಮ ಧ್ಯೇಯ ಸಾಧನೆಗಾಗಿ ಕಠಿಣತಮ ಜೀವನವನ್ನು ಆಯ್ಕೆ ಮಾಡಿಕೊಂಡರು. ಕಂಟಕಾಕೀರ್ಣ ಮಾರ್ಗದಲ್ಲಿ ನಡೆದು ಮುಂದಿನವರಿಗೆ ಮಾದರಿಯಾದರು.
ಇದು ಭಾರತೀಯ ಪತ್ರಿಕೋದ್ಯಮ ನಡೆದುಬಂದ ದಾರಿ.
ಈ ಚಿತ್ರಣಕ್ಕೆ ತೀರ ಭಿನ್ನವಾಗಿ ಮೂಡಿಬಂದದ್ದು ಪಾಶ್ಚಾತ್ಯ ಪತ್ರಿಕೋದ್ಯಮ. ಅಲ್ಲಿ ಅದು ಹುಟ್ಟಿದ್ದು ಹಣ ಗಳಿಕೆಗಾಗಿ. ಮತ್ತೆ ಆ ಹಣ ಗಳಿಕೆಯ ಮಾರ್ಗ ಕೂಡ ಪವಿತ್ರವಾದುದಾಗಿರಲಿಲ್ಲ. ಯುರೋಪಿಯನ್ ಪತ್ರಿಕೋದ್ಯಮದ ಶೈಶವದ ದಿನಗಳಲ್ಲಿ ವಾರ್ತಾ ಪುಸ್ತಕಗಳು ಎಂದು ಕರೆಯಿಸಿಕೊಂಡ ಅನಿಯಮಿತ ಪತ್ರಿಕೆಗಳು ಹೊರಡುತ್ತಿದ್ದವು. ಅಂಥ ವಾರ್ತಾ ಪುಸ್ತಕಗಳ ಪೈಕಿ ನಥೇನಿಯಲ್ ಬಟ್ಲರ್ ಎಂಬಾತ ಪ್ರಕಟಿಸಿದ “ಯಾರ್ಕ್‌ಶೈರ್‌ನ ಕೊಲೆಗಳು” ಎಂಬ ಹೆಸರಿನ ಪತ್ರಿಕೆ ಪ್ರಮುಖವಾದದ್ದು. ಇಂದು ಹಣ ಗಳಿಕೆಯೇ ಮುಖ್ಯವಾಗಿರುವ ಕ್ರೈಮ್ ಪತ್ರಿಕೆಗಳಿಗೆ ಬಹುಶಃ ನಥೇನಿಯಲ್ ಬಟ್ಲರ್‌ನ ಪತ್ರಿಕೆ ವಂಶಸ್ಥಾಪಕನಿರಬಹುದು! ಯುರೋಪಿನಲ್ಲಿ ಹುಟ್ಟಿಬಂದ ಪತ್ರಿಕೋದ್ಯಮದ ಆದಿಮ ಆವೃತ್ತಿಗಳು ಒಂದು ಧ್ಯೇಯ ಸಾಧನೆಗಾಗಿ ಬದುಕಿದ್ದು ಅಥವಾ ಬಲಿಯಾಗಿದ್ದುದರ ವಿವರಗಳು ನಮಗೆ ಇತಿಹಾಸದಲ್ಲಿ ನಮಗೆ ದೊರಕುವುದಿಲ್ಲ.
ಭಾರತದಲ್ಲಿ ವೊದಲ ಪತ್ರಿಕೆಯನ್ನು ಹುಟ್ಟುಹಾಕಿದ ಜೇಮ್ಸ್ ಅಗಸ್ಟಸ್ ಹಿಕ್ಕಿ ಕೂಡ ಅದನ್ನೊಂದು ವಾಣಿಜ್ಯ ಚಟುವಟಿಕೆಯಾಗಿ ಶುರು ಮಾಡಿದ್ದ. ಆತನ ಪತ್ರಿಕೆಯ ಹೆಸರೇ “ದಿ ಬೆಂಗಾಲ್ ಎಡ್ವರ್‌ಟೈಸರ್” ಅಂದರೆ ಜಾಹೀರಾತಿಗೆ ಪ್ರಾಧಾನ್ಯ. ಅಲ್ಲಿಂದ ಇಲ್ಲಿಯವರೆಗೂ ಹಣ ಗಳಿಕೆಯೇ ಪಾಶ್ಚಾತ್ಯ ಪತ್ರಿಕೋದ್ಯಮದ ಅಸ್ತಿವಾರವಾಗಿ ಮುಂದುವರಿದುಕೊಂಡು ಬಂದಿದೆ.
ಇವೆರಡೂ ಧಾರೆಗಳನ್ನು ಸಂಕ್ಷಿಪ್ತವಾಗಿ ಬಣ್ಣಿಸುವುದಾದರೆ ಭಾರತೀಯ ಪತ್ರಿಕೋದ್ಯಮದ ದಾರಿ ಮತ್ತು ಗುರಿ-ಮೌಲ್ಯಗಳ ಸ್ಥಾಪನೆಯಾದರೆ ಪಾಶ್ಚಾತ್ಯ ಪತ್ರಿಕೋದ್ಯಮದ ದಾರಿ ಮತ್ತು ಗುರಿ ಹಣಗಳಿಕೆ.
ಸ್ವಾತಂತ್ರ್ಯ ಬಂದ ಕೆಲವು ವರ್ಷಗಳವರೆಗೂ ನಮ್ಮ ಪತ್ರಿಕೋದ್ಯಮವು ಮೌಲ್ಯ ಸ್ಥಾಪನೆಯ ದಾರಿಯಲ್ಲಿ ಮುಂದುವರೆದಿತ್ತು. ಆದರೆ ಕ್ರಮೇಣ ಅದು ವೃತ್ತಿಯಾಗಿ ಪರಿವರ್ತನೆ ಹೊಂದಿತು. ತುರ್ತುಪರಿಸ್ಥಿತಿಯ ಬಳಿಕ ಅಂದರೆ ೧೯೮೦ರ ದಶಕದ ಅನಂತರ ಅದು ಲಾಭ ಗಳಿಕೆಯ ಗುರಿಯಾಗುಳ್ಳ ಉದ್ಯಮವಾಗಿ ಮಾರ್ಪಟ್ಟಿತು. ಅದಾದರೂ ಸ್ವಲ್ಪಮಟ್ಟಿಗೆ ಸಹ್ಯ ಎಂದುಕೊಂಡರೆ ೨೧ನೆಯ ಶತಮಾನಕ್ಕೆ ಕಾಲಿಟ್ಟ ಬಳಿಕ ನಾವು ಕಂಡ ಐತಿಹಾಸಿಕ ಬದಲಾವಣೆ ಎಂದರೆ ಹಣ ಗಳಿಕೆಗಾಗಿ ಯಾವ ಮಾರ್ಗವಾದರೂ ಸರಿ ಎಂಬ ಧೋರಣೆಯನ್ನು ಮಾಧ್ಯಮ ಕ್ಷೇತ್ರವು ಅಂಗೀಕರಿಸಿದ್ದು.
ಸುಮಾರು ಒಂದು ದಶಕದ ಹಿಂದೆ ಭಾರತೀಯ ಪತ್ರಿಕೆಗಳ ಸಂಪಾದಕರ ಪ್ರಾತಿನಿಧಿಕ ಸಂಘಟನೆ “ದಿ ಎಡಿಟರ‍್ಸ್ ಗಿಲ್ಡ್ ಆಫ್ ಇಂಡಿಯಾ” ನಮ್ಮ ಮಾಧ್ಯಮ ರಂಗದಲ್ಲಿ ಬೇರೂರುತ್ತಿರುವ “ಪೇಯ್ಡ್ ನ್ಯೂಸ್” ಮತ್ತು ಜಾಹೀರಾತಿನೊಂದಿಗೆ ಸಂಬಂಧ ಹೊಂದಿದ ಸುದ್ದಿ ಪ್ರಕಟಣೆ ಇವೆರಡರ ವಿರುದ್ಧ ಕಠಿಣವಾದ ಮಾತುಗಳುಳ್ಳ ನಿರ್ಣಯ ಅಂಗೀಕರಿಸಿತು. ಅವುಗಳನ್ನು ಈ ಕೂಡಲೇ ನಿಲ್ಲಿಸಬೇಕೆಂದು ಆ ನಿರ್ಣಯವು ಒತ್ತಾಯಿಸಿತ್ತು. ಅದರ ಪರಿಣಾಮವಾಗಿ ಈ ಎರಡು ದುಷ್ಟ ಪ್ರವೃತ್ತಿಗಳು ಕಡಿಮೆಯಾಗಿವೆಯೇ? ಖಂಡಿತ ಇಲ್ಲ. ಬದಲಾಗಿ ಅವು ಇನ್ನೂ ಹೆಚ್ಚಾಗಿವೆ. ಎಡಿಟರ‍್ಸ್ ಗಿಲ್ಡ್ ತನ್ನ ಈ ನಿರ್ಣಯವನ್ನು ಮುಂದಿಟ್ಟುಕೊಂಡು ಮಾಧ್ಯಮ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯುವ ಒಂದು ಘನತೆವೆತ್ತ ಹೋರಾಟವನ್ನು ಶುರು ಮಾಡಬಹುದಿತ್ತು. ಆದರೆ ಕೇವಲ ನಿರ್ಣಯಕ್ಕೆ ಅದು ತನ್ನ ಧ್ವನಿಯನ್ನು ಸೀಮಿತಗೊಳಿಸಿಕೊಂಡಿತು ಎಂದರೆ ಮಾಧ್ಯಮ ಕ್ಷೇತ್ರವು ಹಣದ ಹಿಂದೆ ಬೀಳುವ ಪ್ರವೃತ್ತಿಯನ್ನು ತಡೆಗಟ್ಟುವ ಇಚ್ಛಾಶಕ್ತಿಯೇ ಅದಕ್ಕಿಲ್ಲ ಎಂದು ಅರ್ಥೈಸಲು ಅವಕಾಶವಾಗುತ್ತದೆ.
ಓದುಗರಿಗೆ ವೊದಲ ಮಣೆ ಎನ್ನುವುದು ಸೈದ್ಧಾಂತಿಕ ಪತ್ರಿಕೋದ್ಯಮ ಆರಿಸಿಕೊಂಡ ಮಾರ್ಗವಾಗಿತ್ತು. ಆದರೆ ಇಂದು ಜಾಹೀರಾತುದಾರರಿಗೆ ಮತ್ತು ಕಪ್ಪು/ಬಿಳಿಯ ಹಣ ನೀಡುವವರಿಗೆ ವೊದಲ ಮಣೆ. ಹಾಗಾಗಿಯೇ ಇಂದು ವಾರದ ಅನೇಕ ದಿನಗಳಲ್ಲಿ ದಿನಪತ್ರಿಕೆಗಳ ವೊದಲ ಇಡೀ ಪುಟವನ್ನು ಜಾಹೀರಾತುಗಳು ಆಕ್ರಮಿಸಿಕೊಂಡಿರುತ್ತವೆ. ಎಡಿಟರ‍್ಸ್ ಗಿಲ್ಡ್ ತಾನು ಸ್ವೀಕರಿಸಿದ ಠರಾವು ಜಾರಿಗೆ ಬರುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ನಡೆಸಿದೆಯೇ? ಇದನ್ನು ಪರಿಶೀಲಿಸಿದಾಗ ಅದು ಪ್ರಾಮಾಣಿಕ ಪ್ರಯತ್ನ ನಡೆಸಿದ ಬಗ್ಗೆ ಯಾವುದೇ ಆಧಾರ ದೊರೆಯುವುದಿಲ್ಲ. ಎಡಿಟರ‍್ಸ್ ಗಿಲ್ಡ್ ಸಂಘಟನೆಯ ಯಾವೊಬ್ಬ ಸದಸ್ಯನೂ ಹಣ ಆಧಾರಿತ ಪತ್ರಿಕೋದ್ಯಮವನ್ನು ವಿರೋಧಿಸಿ ತಾನು ಕೆಲಸ ಮಾಡುತ್ತಿರುವ ಪತ್ರಿಕೆಯಿಂದ ರಾಜೀನಾಮೆ ಕೊಟ್ಟು ಹೊರಬಂದ ನಿದರ್ಶನವಿದೆಯೇ? ಹೊರಬರುವುದಿರಲಿ, ಕನಿಷ್ಠ ಪಕ್ಷ ಬಾಯಿಮಾತಿನ ಪ್ರತಿಭಟನೆಯನ್ನಾದರೂ ಮಾಡಿದ್ದು ನನಗೆ ಗೊತ್ತಿಲ್ಲ. ಅಲ್ಲಿಗೆ ಈ ಠರಾವಿನ ಪೊಳ್ಳುತನ ಬಯಲಾಗುತ್ತದೆ.
ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕತೆ ಭಾರತದ ಆತ್ಮ ಎಂದು ಸಾರಿದ್ದರು. ಪರಕೀಯರ ಗುಲಾಮಿತನವನ್ನು ನಾವು ಬಿಸಾಕಿದ ಬಳಿಕ ನಮ್ಮ ರಾಷ್ಟ್ರಜೀವನದಲ್ಲಿ ನಮ್ಮತನವನ್ನು ನಾವು ಮೆರೆಯಬೇಕಾಗಿತ್ತು. ನಮ್ಮತನದ ಪುನರ್ ಸ್ಥಾಪನೆಗಾಗಿ ನಮ್ಮ ಮಾಧ್ಯಮಗಳು ವಿಶೇಷವಾಗಿ ಅಹೋರಾತ್ರಿ ಶ್ರಮಿಸಬೇಕಾಗಿತ್ತು. ನಮ್ಮತನ ಎಂದರೆ ಆಧ್ಯಾತ್ಮಿಕತೆಯ ಅಡಿಪಾಯದ ಮೇಲೆ ರಾಷ್ಟ್ರಜೀವನದ ನಿರ್ಮಾಣ. ಸಂಸ್ಕೃತಿಯ ಬುನಾದಿಯ ಮೇಲೆ ಸಾರ್ವಜನಿಕ ಬದುಕಿನ ಆವಿಷ್ಕಾರ. ಆದರೆ ನಮ್ಮ ಮಾಧ್ಯಮಗಳು ಪಾಶ್ಚಾತ್ಯ ರೀತಿನೀತಿಗಳನ್ನು ಮತ್ತು ವೈಚಾರಿಕ ಧೋರಣೆಗಳನ್ನು ಅಂಗೀಕರಿಸಿದವು. ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯಿಂದ ಹೊರತಾಗಿರುವ ಭಾರತೀಯ ಪತ್ರಿಕೋದ್ಯಮದ ಮುಖ್ಯಧಾರೆ ನಮ್ಮ ಪರಂಪರೆಯಿಂದ ಬಹುದೂರ ಹೋಗಿಬಿಟ್ಟಿದೆ. ಇದನ್ನು ಖಂಡಿಸಿರುವ ಜಗತ್ಪ್ರಸಿದ್ಧ ತತ್ತ್ವಜ್ಞಾನಿ ಓಶೋ ಹೇಳಿದ ಮಾತು ಇಲ್ಲಿ ಉಲ್ಲೇಖಾರ್ಹ: “ಆಧ್ಯಾತ್ಮಿಕತೆಯೇ ಬದುಕಿನ ಒಳಾರ್ಥ. ಆತ್ಮವಿಲ್ಲದ ಮನುಜ ಬರೀ ಹೆಣ ಮಾತ್ರ ಮತ್ತು ಅಧ್ಯಾತ್ಮವಿಲ್ಲದ ಶಿಕ್ಷಣ, ಪತ್ರಿಕೋದ್ಯಮ ಇವೆಲ್ಲವೂ ಕೊಳೆತು ನಾರುವ ಹೆಣಗಳು! ಪತ್ರಿಕೋದ್ಯಮ ಪಾಶ್ಚಾತ್ಯರ ಬಳುವಳಿ. ಪಶ್ಚಿಮದ ಸುದ್ದಿಮಾಧ್ಯಮಗಳಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇಲ್ಲ. ಕಾರಣ, ಅಲ್ಲಿನ ಜನರಿಗೆ ಆಸಕ್ತಿ ಇಲ್ಲ…ನಿಮ್ಮ ವಿಶ್ವವಿದ್ಯಾಲಯದಲ್ಲಾಗಲೀ ಕಾಲೇಜಲ್ಲಾಗಲೀ ಶಾಲೆಯಲ್ಲಾಗಲೀ ಬೇರೆಲ್ಲೇ ಆಗಲಿ ಪಶ್ಚಿಮದ ದಾಸ್ಯಕ್ಕೆ ತುತ್ತಾದ ಗುಲಾಮಗಿರಿ ಲಾಸ್ಯವಾಡುತ್ತಿದೆ. ಪಶ್ಚಿಮದಲ್ಲಿ ಏನೇ ನಡೆದರೂ ಅವನ್ನು ಅನುಕರಿಸಲೇ ಬೇಕು. ಅದು ನಿಮ್ಮ ಅರಿವಿಗೆ ಬಾರದಂತೆ ರೂಢಿಗೊಳಗಾಗಿದೆ.ಪತ್ರಿಕೋದ್ಯಮವೆನ್ನುವುದು ಸ್ವಂತಿಕೆಯ ಹಾದಿ ಕಲಿಯುವಂತಹದ್ದು… ಪತ್ರಿಕೋದ್ಯಮವನ್ನು ಪಶ್ಚಿಮದ ಬೇರಿನಿಂದ ಕಿತ್ತು, ಅದಕ್ಕೆ ಅಧಿಕೃತ ಅಸಲೀ ರೂಪ ಕೊಡಬೇಕು…ಕಾಲ ಫಕ್ವವಾಗಿದೆ. ಪತ್ರಿಕೋದ್ಯಮದ ಹೊಸ ಶಕೆಯು ಆರಂಭವಾಗಬೇಕಿದೆ.  ಎಷ್ಟು ಸಾಧ್ಯವೋ ಅಷ್ಟು ಬಲ ಪ್ರಯೋಗಿಸಿ ರಾಜಕೀಯವನ್ನು ನಿಮ್ಮ ಪತ್ರಿಕೆಯ ಕೊನೆಯ ಪುಟಕ್ಕೆ ತಳ್ಳಿಬಿಡಿ. ರಾಜಕೀಯವೆನ್ನುವುದು ನಮ್ಮ ಆತ್ಮವಲ್ಲ. ಅದು ನೀವು ಜನಮನದಲ್ಲಿ ಹರಡುತ್ತಿರುವ ಕೊಳಕು ಆಟ.”
ಇಂದು ರಾಜಕೀಯವೆನ್ನುವುದು ಹಣ ಮಾಡುವ ಹೊಲಸು ದಂಧೆಯಾಗಿದೆ. ಆ ದಾರಿಯಲ್ಲೇ ಹೆಜ್ಜೆ ಇಟ್ಟಿದ್ದು ಇಂದಿನ ಮಾಧ್ಯಮರಂಗ. ಹಿಂದೆ ದೊಡ್ಡ ದೊಡ್ಡ ರಾಷ್ಟ್ರೀಯ ಇಂಗ್ಲೀಷ್ ಪತ್ರಿಕೆಗಳ ಹಿರಿಯ ವರದಿಗಾರರು ಕಾರು ಕೊಂಡರೆ ಮಾಧ್ಯಮ ವಲಯದಲ್ಲಿ ಅದು ದೊಡ್ಡ ಸುದ್ದಿ. ಇಂದು ಚಿಕ್ಕ ಚಿಕ್ಕ ಪಟ್ಟಣಗಳಲ್ಲಿ ಕೆಲಸ ಮಾಡುವ ಅರೆಕಾಲಿಕ ವರದಿಗಾರರು ಕಾರು ಕೊಂಡರೂ ಅದು ಸುದ್ದಿಯಲ್ಲ. ಏಕೆ? ಉತ್ತರ ಎಲ್ಲರಿಗೂ ಗೊತ್ತಿರುವ ಬಹಿರಂಗ ಗುಟ್ಟು. ಹಿಂದೆ ಪತ್ರಿಕಾ ಕ್ಷೇತ್ರದಲ್ಲಿರುವವರ ಆದಾಯ ಅತ್ಯಂತ ಕಡಿಮೆ ಇರುತ್ತಿತ್ತು. ಅದು ಇಂದು ಹಲವು ಪಟ್ಟು ಹೆಚ್ಚಾಗಿರುವುದು ಸತ್ಯವಾದರೂ ಮಾಧ್ಯಮ ಕ್ಷೇತ್ರದಲ್ಲಿರುವವರ ಪೈಕಿ ಗಣನೀಯ ಸಂಖ್ಯೆಯ ಜನ ಹಣಕಾಸಿನ ವಿಷಯದಲ್ಲಿ ತಮ್ಮ ಚಾರಿತ್ರ್ಯ ಶುದ್ಧಿ ಇಟ್ಟುಕೊಂಡಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.
ರಾಜಕೀಯ ಕ್ಷೇತ್ರ ಇಂದು ಜನಸಾಮಾನ್ಯರ ವಿಶ್ವಾಸವನ್ನು ಕಳೆದುಕೊಂಡಿದೆ. ಮಾಧ್ಯಮ ಕ್ಷೇತ್ರ ಕೂಡ ವಿಶ್ವಾಸ-ಅವಿಶ್ವಾಸಗಳ ನಡುವಿನ ಗಡಿರೇಖೆಯ ಮೇಲೆ ನಿಂತಿದೆ. ಇದರರ್ಥ ಮಾಧ್ಯಮ ಕ್ಷೇತ್ರದಲ್ಲಿರುವವರೆಲ್ಲ ಖಳರು-ಖೂಳರು ಎನ್ನುವುದು ನನ್ನ ಅಭಿಪ್ರಾಯವಲ್ಲ. ಅಲ್ಲಿ ಸಜ್ಜನರಿದ್ದಾರೆ, ಪ್ರಾಮಾಣಿಕರಿದ್ದಾರೆ ಮತ್ತು ಧ್ಯೇಯವಾದಿಗಳಿದ್ದಾರೆ. ಆದರೆ ಅವರ ಸಂಖ್ಯೆ? ತುಂಬ ಕಡಿಮೆ! ಸ್ವಾತಂತ್ರ್ಯಪೂರ್ವದಲ್ಲಿ ಧ್ಯೇಯ ಸಾಧನೆಗಾಗಿ ತಮ್ಮದೆಲ್ಲವನ್ನೂ ತ್ಯಾಗ ಮಾಡಿದ ಮಾದರಿಗಳನ್ನು ಇಂದು ನಾವು ಮಾಧ್ಯಮ ಕ್ಷೇತ್ರದಲ್ಲಿ ಕಾಣಲು ಸಾಧ್ಯವೇ? ಅಂತಹ ತ್ಯಾಗದ ಮಾತನ್ನಾಡಿದರೆ ಇಂದಿನ ಮಾಧ್ಯಮ ಮಂದಿ ಅದನ್ನು ಲೇವಡಿ ಮಾಡಿ ನಕ್ಕಾರು!
“ಸತ್ಯಮೇವ ಜಯತೇ” ಎನ್ನುವುದು ನಮ್ಮ ರಾಷ್ಟ್ರದ ಧ್ಯೇಯವಾಕ್ಯ.
ಅದನ್ನು ಜಾರಿಗೆ ತರುವುದು ನಮ್ಮೆಲ್ಲರ ರಾಷ್ಟ್ರೀಯ ಕರ್ತವ್ಯ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಪತ್ರಕರ್ತರ ಮಟ್ಟಿಗೆ ಹೇಳುವುದಾದರೆ ಸಾಮಾನ್ಯ ಮನುಷ್ಯನಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಅವರು ಈ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಏಕೆಂದರೆ ಪತ್ರಕರ್ತರ ಮೂಲಭೂತ ಕಾರ್ಯವೇ ಸತ್ಯ ಸುದ್ದಿಯನ್ನು ಜನರಿಗೆ ಒದಗಿಸುವುದು. ಅದು ಸಾಮಾನ್ಯ ವರದಿಯಾಗಿರಲಿ, ವಿಶೇಷ ವರದಿಯಾಗಿರಲಿ, ಸುದ್ದಿ ವಿಶ್ಲೇಷಣೆಯಾಗಿರಲಿ, ತನಿಖಾ ವರದಿಯಾಗಿರಲಿ ಅಥವಾ ಸಂಪಾದಕೀಯ ಅಗ್ರಲೇಖನಗಳೇ ಆಗಿರಲಿ, ಅವೆಲ್ಲವೂ ಸತ್ಯದ ಮೇಲೆ ನಿಂತಿರಬೇಕು, ಸತ್ಯವನ್ನು ಪ್ರತಿಪಾದಿಸಬೇಕು ಮತ್ತು ಸತ್ಯಕ್ಕೆ ಜಯವನ್ನು ತಂದುಕೊಡಬೇಕು. ಸಾಮಾನ್ಯ ವ್ಯಕ್ತಿಯಾಗಿ ಸತ್ಯಮೇವ ಜಯತೇ ಎನ್ನುವುದನ್ನು ಜಾರಿಗೆ ತರುವುದು ಒಂದು ಕರ್ತವ್ಯವಾದರೆ ಸತ್ಯಕ್ಕೆ ಜಯ ತಂದು ಕೊಡುವುದು ಪತ್ರಕರ್ತನಾಗಿ ಮತ್ತೊಂದು ಕರ್ತವ್ಯ. ಹೀಗೆ ದ್ವಿವಿಧ ಕರ್ತವ್ಯಗಳನ್ನು ನಮ್ಮ ಮಾಧ್ಯಮ ಕ್ಷೇತ್ರ ನಿರ್ವಹಿಸಬೇಕಾಗಿದೆ.
ಈ ದ್ವಿವಿಧ ಕರ್ತವ್ಯವನ್ನು ನೆರವೇರಿಸಲು ಬೇಕಾಗಿ ನಮ್ಮ ಮಾಧ್ಯಮ ಕ್ಷೇತ್ರವು ಹಣಗಳಿಕೆಯೇ ಪ್ರಧಾನವಾದ ಪಾಶ್ಚಾತ್ಯ ಕಾರ್ಯಶೈಲಿಯಿಂದ ಹೊರಬರುವುದು ಅನಿವಾರ್ಯ. ಸತ್ಯಕ್ಕೆ ಸವಾಲು ಹಾಕುವ ಸೈದ್ಧಾಂತಿಕ ಪತ್ರಿಕೋದ್ಯಮ ಹಾಗೂ ಹಣ ಗಳಿಕೆಯ ಪತ್ರಿಕೋದ್ಯಮ ಇವೆರಡನ್ನೂ ಎತ್ತಿ ಬಿಸಾಡಲೇ ಬೇಕು. ನಥೇನಿಯಲ್ ಬಟ್ಲರ್ ಮಾರ್ಗದಿಂದ ಹೊರಬಂದು ನಾರದ ಮಹರ್ಷಿ ಹಾಕಿಕೊಟ್ಟ, ರಾಜಾರಾಮ ಮೋಹನರಾಯ್ ನಡೆದು ತೋರಿಸಿದ ದಾರಿಯತ್ತ ತಿರುಗುವುದು ಇಂದಿನ ಜರೂರು.

Image